ಚಿತ್ರದುರ್ಗ: ಕರಡಿ ದಾಳಿಯಿಂದ ಆಕ್ರೋಶಗೊಂಡ ಹೊಸದುರ್ಗ ತಾಲೂಕಿನ ದಳವಾಯಿಕಟ್ಟೆ ಗ್ರಾಮದ ಜನರು ದೊಣ್ಣೆಗಳಿಂದ ಬಡಿದು ಕರಡಿಯನ್ನು ಸಾಯಿಸಿದ್ದಾರೆ.
ಇಂದು ಮಧ್ಯಾಹ್ನ ದಳವಾಯಿಕಟ್ಟೆ ಬಳಿ ಒಂದು ಹಸು ಹಾಗೂ 7 ಜನರ ಮೇಲೆ ಕರಡಿ ದಾಳಿ ಮಾಡಿತ್ತು. ಘಟನೆಯಲ್ಲಿ ಗ್ರಾಮದ ರಾಜಣ್ಣ (50) ಎಂಬವರು ಸಾವನ್ನಪ್ಪಿದ್ದರು. ಅಲ್ಲದೇ ರಮೇಶ್, ಉಮೇಶ್ ಮತ್ತು ಶಶಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆ ಗ್ರಾಮಸ್ಥರನ್ನು ಕೆರಳಿಸಿತ್ತು. ಕರಡಿಯನ್ನು ಸೆರೆ ಹಿಡಿಯುವ ಅರಣ್ಯ ಇಲಾಖೆ ಸಿಬ್ಬಂದಿ ಪ್ರಯತ್ನವೂ ವಿಫಲವಾಗಿತ್ತು.
ಬಳಿಕ ಮತ್ತೆ ಗ್ರಾಮಕ್ಕೆ ನುಗ್ಗಿದ ಕರಡಿಯನ್ನು ಹಿಡಿದ ಗ್ರಾಮಸ್ಥರು, ದೊಣ್ಣೆಗಳಿಂದ ಬಡಿದು ಸಾಯಿಸಿ, ಬಳಿಕ ಅದನ್ನು ಜೆಸಿಪಿ ಮೂಲಕ ರವಾನೆ ಮಾಡಿಸಿದ್ದಾರೆ.