ETV Bharat / state

ಟೊಮೇಟೊ ಬೆಲೆ ದಿಢೀರ್​ ಕುಸಿತ; ಕೋಟೆನಾಡಿನ ರೈತರಲ್ಲಿ ಆತಂಕ - ಚಿತ್ರದುರ್ಗ ತಾಲೂಕಿನ ‌ದ್ಯಾಮವ್ವನಹಳ್ಳಿ ಗ್ರಾಮ

ಚಿತ್ರದುರ್ಗ ಜಿಲ್ಲೆಯ ಸಾವಿರಾರು ಜನ ರೈತರು ಟೊಮೇಟೊ ಬೆಳೆದು ಈ ಬಾರಿ ಅಪಾರ ಲಾಭದ ನಿರೀಕ್ಷೆಯಲ್ಲಿದ್ದರು. ಶೀಘ್ರದಲ್ಲಿಯೇ ಟೊಮೇಟೊ ಬೆಳೆ ಕಟಾವು ಮಾಡಲು ಸಿದ್ಧತೆ ನಡೆಸಿದ್ದರು. ಆದರೆ, ಟೊಮೇಟೊ ಬೆಲೆ ದಿಢೀರ್ ನೆಲ ಕಚ್ಚಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ.

Tomato Prices Decline
ಟೊಮೆಟೊ ಬೆಲೆ ಕುಸಿತ
author img

By

Published : Mar 30, 2022, 1:29 PM IST

ಚಿತ್ರದುರ್ಗ: ಅದು ಬರದನಾಡು, ಅಲ್ಲಿ‌ನ ರೈತರ ಕೈಗೆ ಬೆಳೆ ಸಿಗೋದೇ ಅಪರೂಪ. ಆದರೆ, ಈ ಬಾರಿ‌ ಉತ್ತಮವಾಗಿ ಬೆಳೆದಿದ್ದ ಬೆಳೆಯಿಂದ ಅಪಾರ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಟೊಮೇಟೊ ಬೆಲೆ ಕುಸಿತ ಶಾಕ್​​ ನೀಡಿದೆ. ಕೈಗೆ ಬಂದ ತುತ್ತು ಬಾಯಿಗೆ‌ ಇಲ್ಲದಂತಾಗಿದ್ದು, ರೈತರು ದಿಕ್ಕೆಟ್ಟಿದ್ದಾರೆ.

ಹೀಗೆ ಗಿಡದಲ್ಲೇ ಕಮರಿ ಹೋಗಿರುವ ಟೊಮೇಟೊ. ಕೀಳುವ ಮುನ್ನವೇ ನೆಲಕ್ಕೆ ಬಿದ್ದು ಕೊಳೆಯುತ್ತಿದೆ. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಕೃಷಿ ಸಚಿವ ಬಿ.ಸಿ.ಪಾಟೀಲ್‌ ಉಸ್ತುವಾರಿಯ ಚಿತ್ರದುರ್ಗ ತಾಲೂಕಿನ ‌ದ್ಯಾಮವ್ವನಹಳ್ಳಿ ಗ್ರಾಮದ‌ ರೈತ ಪಾಪಣ್ಣ ಎಂಬುವವರ ಜಮೀನು. ಸತತ ಬರದಿಂದ‌ ಕಂಗೆಟ್ಟಿದ್ದ ಪಾಪಣ್ಣ ಟೊಮೇಟೊ ಬೆಳೆದು ಸಾಲದ ಶೂಲಕ್ಕೆ ಸಿಲುಕಿದ್ದಾನೆ.

ಟೊಮೇಟೊ ಬೆಲೆ ದಿಢೀರ್​ ಕುಸಿತ; ಕೋಟೆನಾಡಿನ ರೈತರಲ್ಲಿ ಆತಂಕ...

ಅಲ್ಲದೇ ಚಿತ್ರದುರ್ಗ ಜಿಲ್ಲೆಯ ಸಾವಿರಾರು ಜನ ರೈತರು ಕೂಡ ಮಿಶ್ರ ಬೆಳೆ‌ ಬೆಳೆಯಲು ಸಾಲ ಮಾಡಿ ಲಕ್ಷಾಂತರ ರೂ.ಬಂಡವಾಳ ಹಾಕಿದ್ದರು. ಟೊಮೆಟೊ ಬೆಳೆದು ಈ ಬಾರಿ ಅಪಾರ ಲಾಭದ ನಿರೀಕ್ಷೆಯಲ್ಲಿದ್ದರು. ಶೀಘ್ರದಲ್ಲಿಯೇ ಟೊಮೇಟೊ ಬೆಳೆ ಕಟಾವು ಮಾಡಲು ಸಿದ್ಧತೆ ನಡೆಸಿದ್ದರು. ಆದರೆ ಟೊಮೇಟೊ ಬೆಲೆ ದಿಢೀರ್ ನೆಲ ಕಚ್ಚಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ.

25 ಕೆ.ಜಿ ಟೊಮೇಟೊ ಬಾಕ್ಸ್ ಒಂದಕ್ಕೆ ಕೇವಲ‌ 2 ರೂ.ಗೆ ಮಾರಾಟವಾಗುತ್ತಿದೆ. ಇದರಿಂದಾಗಿ ಬ್ಯಾಂಕ್ ಹಾಗೂ ಫೈನಾನ್ಸ್ ಗಳಲ್ಲಿ ಸಾಲ‌ ಮಾಡಿರುವ ಅನ್ನದಾತರು ಸಾಲ ತೀರಿಸಲಾಗದೇ ಆತ್ಮಹತ್ಯೆಗೆ ಶರಣಾಗಲು ಮುಂದಾಗಿದ್ದಾರೆ. ಅಪಾರ ಬೆಳೆ‌ ಬೆಳೆದು,ಉತ್ತಮ‌ ಇಳುವರಿ ಬಂದರೂ ಕೂಡ ತಕ್ಕ ಬೆಲೆ ಸಿಗಲಾರದೇ ಕೋಟೆನಾಡಿನ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಅಲ್ಲದೇ ಕಣ್ಮುಚ್ಚಿ ಕುಳಿತ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಜಿಲ್ಲೆಯಲ್ಲಿ ಟೊಮೇಟೊದಂತಹ ಬೆಳೆಗಳನ್ನು‌ ಸಂರಕ್ಷಿಸಲು‌ ಈ ಭಾಗದಲ್ಲೊಂದು ಕೋಲ್ಡ್ ಸ್ಟೋರೇಜ್ ಆರಂಭಿಸಬೇಕು. ಅಲ್ಲದೇ ನಷ್ಟ ಅನುಭವಿಸುತ್ತಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದಾರೆ.

ಒಟ್ಟಾರೆ ಕೋಟೆನಾಡಲ್ಲಿ ಉತ್ತಮ‌ ಬೆಳೆ ಬಂದರೂ ಸಹ ಟೊಮೇಟೊ ಬೆಲೆ ಕುಸಿತದಿಂದಾಗಿ ಅನ್ನದಾತರು ಸಂಕಷ್ಟಕ್ಕೆ ಸಿಲುಕಿ ಕಣ್ಣೀರಿಡುವಂತಾಗಿದೆ. ಹೀಗಾಗಿ ಸರ್ಕಾರ ಹಾಗೂ ಕೃಷಿ ಸಚಿವ ಬಿ.ಸಿ ಪಾಟೀಲ್ ತಮ್ಮ ಉಸ್ತುವಾರಿ‌ ಜಿಲ್ಲೆಯ ರೈತರ ಕಣ್ಣೀರು ಒರೆಸಲು ಅಗತ್ಯ ಕ್ರಮ‌ ಕೈಗೊಳ್ಳುತ್ತಾ? ಎಂಬುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಹಿಂದು ದ್ವೇಷ ನಿಮ್ಮ ಕುಟುಂಬದಲ್ಲಿ ಎದ್ದು ಕಾಣುತ್ತಿದೆ : ಹೆಚ್​ಡಿಕೆ ವಿರುದ್ಧ ಸಿದ್ದಲಿಂಗ ಸ್ವಾಮೀಜಿ ಕಿಡಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.