ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಆರ್ ಡಿ ಕವಾಲ್ ನಲ್ಲಿ ಸ್ವಂತ ತಮ್ಮ ತನ್ನ ಸಹೋದರನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಅಮಾನವೀಯ ಘಟನೆ ನಡೆದಿದೆ.
ಮೃತನನ್ನು ಕುಮಾರ್ ನಾಯ್ಕ್ ಎಂದು ಗುರುತಿಸಲಾಗಿದ್ದು, ಆರೋಪಿಯಾದ ಸಂತೋಷ್ ನಾಯ್ಕ್ ನನ್ನು ಬಂಧಿಸಲಾಗಿದೆ.
ಇನ್ನು ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಅರುಣ್, ಮೃತನಾದ ಕುಮಾರ್ ನಾಯ್ಕ್ ಕೆಲಸಕ್ಕೆ ಹೋಗದೇ, ಅಣ್ಣ ಸಂತೋಷ್ ನಾಯ್ಕನಿಗೆ ಹಣಕ್ಕಾಗಿ ಪೀಡಿಸುತ್ತಿದ್ದ, ಕೇಳಿದಾಗಲೆಲ್ಲ ಹಣ ಕೊಡುತ್ತಿದ್ದ ಸಂತೋಷ್ ನಾಯ್ಕನಿಗೂ ಹಾಗೂ ಕುಮಾರ ನಾಯ್ಕ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು. ಇದರಿಂದ ಸಿಟ್ಟನಲ್ಲಿದ್ದ ಸಂತೋಷ್ ನಾಯ್ಕ ಸಹೋದರನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ ಎಂದಿದ್ದಾರೆ.
ಇದರ ಸಂಬಂಧ ಹೊಳಲ್ಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸಂತೋಷ್ ನಾಯ್ಕನನ್ನ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.