ಚಿತ್ರದುರ್ಗ : ಹಿರಿಯೂರು ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವರಾಜ ಅರಸು ನಿಗಮದಿಂದ 4500 ಫಲಾನುಭವಿಗಳಿಗೆ ಇಂದು ವಸತಿ ಸಚಿವ ವಿ.ಸೋಮಣ್ಣ ಆದೇಶ ಪತ್ರಗಳನ್ನು ನೀಡಿದರು.
ಇದೇ ವೇಳೆ ಮಾತಾನಾಡಿದ ಅವರು, ಸಿಎಂ ಬಿಎಸ್‌ವೈ ರಾಜ್ಯದ ಪ್ರಶ್ನಾತೀತ ನಾಯಕರು. ಆದ ಕಾರಣ ಬಿಎಸ್‌ವೈ ಅವರೇ ಉಳಿದ ಅವಧಿಗೂ ಸಿಎಂ ಆಗಿರ್ತಾರೆ. ಇದರಲ್ಲಿ ಯಾವುದೇ ಅನುಮಾನವೇ ಬೇಡ.
ಯಾರು ಹೋಗುತ್ತಾರೆ, ಯಾರು ಇರುತ್ತಾರೆ ಈಗ ಎಲ್ಲವೂ ಗೌಣವಾಗಿದೆ. ಉತ್ತಮ ಕೆಲಸ ಮಾಡುವ ಸರ್ಕಾರ ಅಸ್ಥಿರಕ್ಕೆ ಕೈ ಹಾಕಬಾರದು. ಸಿಎಂ ಈ ವಯಸ್ಸಿನಲ್ಲೂ ನಮ್ಮನ್ನು ಬಡಿದೆಬ್ಬಿಸುವಂತೆ ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿಕೆಗೆ ಸಚಿವ ವಿ ಸೋಮಣ್ಣ ತಿರುಗೇಟು ನೀಡಿದರು.
ಇದನ್ನೂ ಓದಿ : UNLOCK 3.0 ಮುಖ್ಯಾಂಶಗಳು: ಜುಲೈ 5 ರಿಂದ ರಾಜ್ಯದಲ್ಲಿ ಯಾವುದಕ್ಕೆಲ್ಲಾ ಅವಕಾಶ?