ಚಿತ್ರದುರ್ಗ: ಎತ್ತಿನಗಾಡಿ ಓಟದ ಸ್ಪರ್ಧೆ ವೇಳೆ ಎತ್ತಿನ ಗಾಡಿಗಳು ಜನರ ಮೇಲೆ ಹರಿದ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಸೊಂಡೆಕೆರೆ ಗ್ರಾಮದಲ್ಲಿ ನಡೆದಿದೆ.
ಶಿವರಾತ್ರಿ ಹಬ್ಬದ ಪ್ರಯುಕ್ತ ಸೊಂಡೆಕೆರೆ ಗ್ರಾಮದಲ್ಲಿ ಎತ್ತಿನ ಗಾಡಿ ಓಟದ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಈ ವೇಳೆ, 60ಕ್ಕೂ ಅಧಿಕ ಜೋಡೆತ್ತಿನ ಗಾಡಿಗಳು ಆಗಮಿಸಿದ್ದವು. ಸ್ಪರ್ಧೆ ವೀಕ್ಷಣೆಗೆಗಾಗಿ ಸುತ್ತಮುತ್ತಲಿನ ಗ್ರಾಮದ ಜನರು ಬಂದಿದ್ದರು. ಈ ಜನದಟ್ಟಣೆ ನೋಡಿ ಹೆದರಿದ ಎತ್ತುಗಳು ದಿಢೀರನೆ ವೀಕ್ಷಕರೆಡೆ ಓಡಿಬಂದಿವೆ. ಎತ್ತಿನಗಾಡಿಯೊಂದು ಅನಸೂಯಮ್ಮ (67) ಎಂಬ ವೃದ್ಧೆ ಮೇಲೆ ಹರಿದಿದ್ದು, ಅವರ ಕಾಲು ಮುರಿದಿದೆ. ಇನ್ನೂ ಮೂವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.
ಇದನ್ನೂ ಓದಿ: ಉಳ್ಳಾಲ ಯುವತಿ ಆತ್ಮಹತ್ಯೆ ಪ್ರಕರಣ: ಮೂವರು ಗೆಳೆಯರು ಪೊಲೀಸ್ ವಶಕ್ಕೆ
ಸ್ಥಳದಲ್ಲಿದ್ದ ಪೊಲೀಸರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ತಾತ್ಕಾಲಿಕವಾಗಿ ಸ್ಪರ್ಧೆಯನ್ನು ನಿಲ್ಲಿಸಲಾಗಿದ್ದು, ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.