ಚಿತ್ರದುರ್ಗ: ಚಿತ್ರದುರ್ಗದ ಮುರುಘಾ ಮಠದಲ್ಲಿ ಇಂದು ನಡೆದ ಡಾ. ಶಿವಮೂರ್ತಿ ಮುರುಘ ಶರಣರ ಶೂನ್ಯ ಪೀಠಾರೋಹಣ ಬದಲಾವಣೆ ಪರ್ವಕ್ಕೆ ಸಾಕ್ಷಿಯಾಯಿತು.
ಶೂನ್ಯಪೀಠ ಮಠದ ಪಾರಂಪರಿಕ ಆಚರಣೆಯಾಗಿದ್ದರೂ ಸಹ ಸಮಾಜಮುಖಿ ಹಾಗೂ ಬದಲಾವಣೆ ತತ್ವವನ್ನು ಆಧರಿಸಿ ಪ್ರಸಿದ್ಧಿಯಾಗಿರುವ ಮುರುಘ ಶರಣರು ಬೆಳ್ಳಿ ಸಿಂಹಾಸನದ ಬದಲಾಗಿ ಕಟ್ಟಿಗೆ, ಚಿನ್ನದ ಕಿರೀಟ ಬದಲಾಗಿ ರುದ್ರಾಕ್ಷಿ ಕಿರೀಟ ಧರಿಸಿ ಬಸವಣ್ಣವರ ವಚನಗಳನ್ನು ಅಡ್ಡ ಪಲ್ಲಕಿಯಲ್ಲಿಟ್ಟು ಮೆರವಣಿಗೆ ಮಾಡಿ ಸರಳತೆ ಮೆರೆದರು.
ಸರಳ ಹಾಗೂ ಜನರನ್ನು ತಲುಪುವ ಸುಲಭ ಮಾರ್ಗ ಹಾಗೂ ಸಮಾಜಮುಖಿ ಕಲ್ಪನೆ ಆಧಾರದಲ್ಲಿ ಈ ಆಚರಣೆ ನಡೆದಿದ್ದು, ಸಾಂಪ್ರದಾಯಿಕವಾಗಿ ಅನೇಕ ಕಲಾ ಮೇಳಗಳೊಂದಿಗೆ ಶೂನ್ಯ ಪೀಠಾರೋಹಣ ಮಾಡಲಾಯಿತು. ಮಠದಲ್ಲಿ ನರೆದಿದ್ದ ಭಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಶ್ರೀಗಳ ಆಶೀರ್ವಾದ ಪಡೆದರು.