ETV Bharat / state

ಕುರಿ ಕಳ್ಳತನ: ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ - Chitradurga

ಕುರಿ ಕದ್ದು ಪರಾರಿಯಾಗುತ್ತಿದ್ದ ಇಬ್ಬರು ಅಂತಾರಾಜ್ಯ ಖದೀಮರನ್ನು ಹಿರಿಯೂರು ನಗರ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಅನಂತಪುರ ಮೂಲದ ಲೋಕೇಶ ರಂಗರೆಡ್ಡಿ(22) ಹಾಗೂ ಮಾರುತಿ ಪಿ.ಚಂದ್ರಪ್ಪ (25) ಬಂಧಿತ ಆರೋಪಿಗಳು.

two interstate robbers arrested
ಕುರಿ ಕಳವು ಮಾಡುತ್ತಿದ್ದ ಅಂತರ್​ ರಾಜ್ಯ ಕಳ್ಳರ ಬಂಧನ
author img

By

Published : Feb 24, 2021, 7:48 AM IST

ಚಿತ್ರದುರ್ಗ: ಕುರಿ ಕದ್ದು ಪರಾರಿಯಾಗುತ್ತಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ಹೆಡೆಮುರಿ ಕಟ್ಟುವಲ್ಲಿ ಹಿರಿಯೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಆಂಧ್ರಪ್ರದೇಶದ ಅನಂತಪುರ ಮೂಲದ ಲೋಕೇಶ ರಂಗರೆಡ್ಡಿ(22) ಹಾಗೂ ಮಾರುತಿ ಪಿ.ಚಂದ್ರಪ್ಪ (25) ಬಂಧಿತರು. ಆರೋಪಿಗಳು ಹಿರಿಯೂರು ನಗರದಲ್ಲಿ ಅನುಮಾನ್ಪದವಾಗಿ ಓಡಾಡುತ್ತಿದ್ದರು. ಸಂಶಯಗೊಂಡ ಪೊಲೀಸರು ವಿಚಾರಣೆ ನಡೆಸಿದ್ದು, ಆರೋಪಿಗಳು ಕುರಿ ಕಳ್ಳತನ ಮಾಡುವ ಬಗ್ಗೆ ಬಾಯ್ಬಿಟ್ಟಿದ್ದಾರೆ.

ಆರೋಪಿಗಳು ಚಿತ್ರದುರ್ಗ ಜಿಲ್ಲೆಯ ತಳುಕು, ದಾಸರಗಿಡ್ಡಯ್ಯನಟ್ಟಿ ಹಾಗೂ ತುರುವನೂರು ಗ್ರಾಮ ಸೇರಿದಂತೆ ಹಲವು ಕಡೆ ಕುರಿ ಕದ್ದು ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸದ್ಯ ಆರೋಪಿಗಳಿಂದ 80 ಸಾವಿರ ಮೌಲ್ಯದ 11 ಕುರಿ,ಆಡುಗಳು ಸೇರಿದಂತೆ ಕಳ್ಳತನ ಮಾಡಲು ಬಳಸಲಾಗುತ್ತಿದ್ದ ಅಂದಾಜು 3 ಲಕ್ಷ ಮೌಲ್ಯದ ಕಾರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.