ETV Bharat / state

ಲಾಕ್‌ಡೌನ್‌ಗೆ ತತ್ತರಿಸಿದ ಮುದ್ರಣಾಲಯ ಮಾಲೀಕರು: ಒಪ್ಪೊತ್ತಿನ ಊಟಕ್ಕೂ ಪರದಾಟ - ಚಿತ್ರದುರ್ಗ ಲಾಕ್‌ಡೌನ್‌ಗೆ ತತ್ತರಿಸಿದ ಮುದ್ರಣಾಲಯ ಮಾಲೀಕರು

ಮಹಾಮಾರಿ ಕೊರೊನಾ ವೈರಸ್ ಪ್ರತಿಯೊಬ್ಬರ ಬದುಕು ದುಸ್ತರಗೊಳಿಸಿದೆ. ಮದುವೆ, ಸಭೆ-ಸಮಾರಂಭಗಳಿಗೆ ಅತ್ಯಾವಶ್ಯಕವಾದ ಆಮಂತ್ರಣ ಪತ್ರಿಕೆಗಳನ್ನು ಸಿದ್ದಪಡಿಸುವ ಮುದ್ರಣಾಲಯಗಳು ತನ್ನ ಮುದ್ರಣವನ್ನು ನಿಲ್ಲಿಸಿವೆ. ಲಾಕ್ ಡೌನ್ ನಿಂದಾಗಿ ಚಿತ್ರದುರ್ಗ ಜಿಲ್ಲೆಯ ಇಡೀ ಮುದ್ರಣಾಲಯ ಹೈರಾಣಾಗಿದ್ದು, ಮಾಲೀಕರಿಗೆ ದುಡಿಮೆ ಇಲ್ಲದೇ ದಿಕ್ಕು ತೋಚದಂತಾಗಿದೆ.

ಮುದ್ರಣಾಲಯ
ಮುದ್ರಣಾಲಯ
author img

By

Published : May 20, 2020, 10:41 PM IST

ಚಿತ್ರದುರ್ಗ: ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಸರ್ಕಾರ ಘೋಷಿಸಿದ ನಿರ್ಬಂಧಗಳಿಂದಾಗಿ ಮುದ್ರಣಾಲಯದ ಶ್ರಮಿಕರು ತತ್ತರಿಸಿ ಹೋಗಿದ್ದಾರೆ. ಸತತ 4 ಹಂತದ ಲಾಕ್‌ಡೌನ್ ಘೋಷಣೆಯಿಂದಾಗಿ ಮದುವೆ ಸಮಾರಂಭಗಳಿಗೆ ಸರ್ಕಾರ ಬ್ರೇಕ್‌ ಹಾಕಿತ್ತು. ಇದರಿಂದ ಮುದ್ರಣಾಲಯಗಳನ್ನೇ ನಂಬಿ ಜೀವನ ಮಾಡ್ತಿದ್ದ ಮಾಲೀಕರು, ಕೆಲಸಗಾರರ ಬದುಕು ಅತಂತ್ರವಾಗಿದೆ.

ಲಾಕ್‌ಡೌನ್‌ಗೆ ತತ್ತರಿಸಿದ ಮುದ್ರಣಾಲಯ ಮಾಲೀಕರು

ಮಹಾಮಾರಿ ಕೊರೊನಾ ವೈರಸ್ ಪ್ರತಿಯೊಬ್ಬರ ಬದುಕನ್ನು ದುಸ್ತರಗೊಳಿಸಿದೆ. ಮದುವೆ, ಸಭೆ-ಸಮಾರಂಭಗಳಿಗೆ ಅತ್ಯಾವಶ್ಯಕವಾದ ಆಮಂತ್ರಣ ಪತ್ರಿಕೆಗಳನ್ನು ಸಿದ್ದಪಡಿಸುವ ಮುದ್ರಣಾಲಯಗಳು ತನ್ನ ಮುದ್ರಣವನ್ನು ನಿಲ್ಲಿಸಿವೆ. ಲಾಕ್ ಡೌನ್ ನಿಂದಾಗಿ ಚಿತ್ರದುರ್ಗ ಜಿಲ್ಲೆಯ ಇಡೀ ಮುದ್ರಣಾಲಯ ಹೈರಾಣಾಗಿದ್ದು, ಮಾಲೀಕರಿಗೆ ದುಡಿಮೆ ಇಲ್ಲದೇ ದಿಕ್ಕು ತೋಚದಂತಾಗಿದೆ.

ಚಿತ್ರದುರ್ಗದಲ್ಲಿ 60ಕ್ಕೂ ಹೆಚ್ಚು ಮುದ್ರಣಾಲಯಗಳನ್ನೇ ನಂಬಿ ಸುಮಾರು 350 ಜನ ಜೀವನ ನಡೆಸುತ್ತಿದ್ದಾರೆ. ಲಾಕ್‌ಡೌನ್‌ನಿಂದಾಗಿ ಮದುವೆ, ಗೃಹ ಪ್ರವೇಶ, ನಾಮಕರಣ ಇನ್ನಿತರೆ ಕಾರ್ಯಕ್ರಮಗಳ‌ ಮೇಲೆ ಸರ್ಕಾರ ನಿಷೇಧ ಹೇರಿದೆ. ಇದರಿಂದ ಆಮಂತ್ರಣ ಪತ್ರಗಳನ್ನು ಮುದ್ರಿಸದೇ ಮುದ್ರಣಾಲಯಗಳು ಇದೀಗ ಮೂಲೆ ಗುಂಪಾಗಿವೆ.

ಈ ಕುರಿತು ಮುದ್ರಣ ಕಾರ್ಯಾಲಯ ಸಂಘದ ಜಿಲ್ಲಾಧ್ಯಕ್ಷ ಕಿರಣ್ ಮಾತನಾಡಿ, ಲಾಕ್ ಡೌನ್ ನಿಂದ ದುಸ್ತರವಾಗಿರುವ ಬದುಕನ್ನು ಮತ್ತೆ ಕಟ್ಟಿಕೊಳ್ಳಲು ಮುದ್ರಣಾಲಯದ ಮಾಲೀಕರು ಹೆಣಗಾಡುತ್ತಿದ್ದಾರೆ. ತಿಂಗಳಿಗೆ 50 ಸಾವಿರದಷ್ಟು ನಷ್ಟವಾಗಿದ್ದು, ಸರ್ಕಾರ ಘೋಷಿಸುವ ಪ್ಯಾಕೇಜ್ ಗಳಲ್ಲಿ ಇಂತಿಷ್ಟು ನಮಗೂ ಹಣವನ್ನು ಮೀಸಲಿಡುವ ಮೂಲಕ ಮುದ್ರಣಾಲಯ ಮಾಲೀಕರ ನೆರವಿಗೆ ಧಾವಿಸಬೇಕು ಎಂದರು.

ಕೊರೊನಾ ಹರಡುವಿಕೆ ತಡೆಯಲು ಹೇರಲಾಗಿರುವ ನಿರ್ಬಂಧದಿಂದ ರೈತರು, ಕಾರ್ಮಿಕರು, ಆಟೋ ಚಾಲಕರ ನೆರವಿಗೆ ಸರ್ಕಾರ ಧಾವಿಸಿದೆ. ಪಾತಳಕ್ಕೆ ಕುಸಿದಿರುವ ಮುದ್ರಣಾಲಯದ ಮಾಲೀಕರ ನರೆವಿಗೆ ಸರ್ಕಾರ ಧಾವಿಸುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.