ETV Bharat / state

‘ಸರ್ಕಾರದ ಉಳಿದ ಅವಧಿಗೂ ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ’.. ಸಚಿವ ಶ್ರೀರಾಮುಲು ವಿಶ್ವಾಸ - \BS Yeddyurappa Admitted Hospital

ಮುಖ್ಯಮಂತ್ರಿ ಬಿಎಸ್​​​​ವೈಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದರಿಂದ ಬೇಗ ಗುಣಮುಖರಾಗಲಿ ಎಂದು ಆ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವರಲ್ಲಿ ಪ್ರಾರ್ಥಿಸೋಣ..

Our Chief Minister Yeddyurappa for the rest of government: sriramulu
‘ಸರ್ಕಾರದ ಉಳಿದ ಅವಧಿಗೂ ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ’: ಶ್ರೀರಾಮುಲು ವಿಶ್ವಾಸ
author img

By

Published : Aug 3, 2020, 3:42 PM IST

ಚಿತ್ರದುರ್ಗ : ಸರ್ಕಾರದ ಉಳಿದ ಅವಧಿಗೆ ನಮ್ಮ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರೇ.. ಮುಖ್ಯಮಂತ್ರಿ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಶ್ರೀರಾಮುಲು ಬಿಎಸ್​​​​​​ವೈ ಪರ ಬ್ಯಾಟ್​​ ಬೀಸಿದ್ದಾರೆ.

‘ಸರ್ಕಾರದ ಉಳಿದ ಅವಧಿಗೂ ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ’

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಯಾವುದೇ ರಹಸ್ಯ ಸಭೆಗಳು ನಡೆಯುತ್ತಿಲ್ಲ, ಎಲ್ಲಾ ನಾಯಕರು ಒಗ್ಗಟ್ಟಾಗಿದ್ದೇವೆ. ಸರ್ಕಾರದ ಉಳಿದಿರುವ ಅವಧಿಗೂ ಬಿ ಎಸ್ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಬಿಎಸ್​​​​ವೈಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದರಿಂದ ಬೇಗ ಗುಣಮುಖರಾಗಲಿ ಎಂದು ಆ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವರಲ್ಲಿ ಪ್ರಾರ್ಥಿಸೋಣ. ನಮ್ಮ ಮುಖ್ಯಮಂತ್ರಿ 24 ತಾಸುಗಳ ಕಾಲ ಕೋವಿಡ್​​​​ ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ರ್ಯಾಪಿಡ್​​ ಟೆಸ್ಟ್ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ಕೊರೊನಾ ಟಾಸ್ಕ್​​ಫೋರ್ಸ್ ಮಾಡಲು ಚಿಂತನೆ ನಡೆಸಲಾಗಿದೆ ಎಂದರು.

ಸರ್ಕಾರದ ಸೂಚನೆ ಪಾಲಿಸದ 12 ಖಾಸಗಿ ಆಸ್ಪೆತ್ರೆಗಳ ಪರವಾನಿಗೆ ರದ್ದು ಮಾಡಿ 24 ಲಕ್ಷ ಹಣ ವಸೂಲಿ ಮಾಡಿದ್ದ ಆಸ್ಪತ್ರೆಗಳಿಂದ ಮತ್ತೆ ಹಿಂದಿರುಗಿಸುವಂತೆ ಮಾಡಲಾಗಿದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.