ETV Bharat / state

ಪ್ರೀತಿಸಿ ಓಡಿಹೋದ ಮಗಳ ಮೇಲಿನ ಸಿಟ್ಟಿಗೆ ಮೇಕೆಗೆ ಸೀಮಂತ ಮಾಡಿದ ತಾಯಿ! - seemantha programme for the ship at chitradurga

ಹೆಣ್ಣುಮಕ್ಕಳು ಗರ್ಭಿಣಿಯದಾಗ ಹಿಂದೂ ಸಂಪ್ರದಾಯದಂತೆ ಸೀಮಂತ ಮಾಡೋದು ಸಾಮಾನ್ಯ. ಆದ್ರೆ ಇಲ್ಲೊಬ್ಬ ತಾಯಿ ಮಗಳು ಯಾರನ್ನೋ ಪ್ರೀತಿಸಿ ಓಡಿ ಹೋದಳು‌ ಎಂಬ ಸಿಟ್ಟಿನಲ್ಲಿ, ಗರ್ಭಿಣಿ ಮೇಕೆಗೆ ಸೀಮಂತ ಮಾಡಿದ್ದಾರೆ.

seemantha programme for the ship at chitradurga
ಮೇಕೆಗೆ ಸೀಮಂತ ಕಾರ್ಯ ಮಾಡಿದ ತಾಯಿ
author img

By

Published : Mar 9, 2021, 10:15 PM IST

Updated : Mar 10, 2021, 1:07 AM IST

ಚಿತ್ರದುರ್ಗ: ಮೇಕೆಯನ್ನು ಹೆಣ್ಣಿನಂತೆ ಸಿಂಗರಿಸಿ, ಸೀರೆ ಉಡಿಸಿ, ಅದಕ್ಕೆ ಮಡಿಲು ತುಂಬಲಾಯಿತು. ಜಿಲ್ಲೆಯ ನನ್ನಿವಾಳ ಗ್ರಾಮದ ರಾಜು- ಗೀತಾ ದಂಪತಿ ಮೇಕೆಗೆ ಈ ರೀತಿ ವಿಶೇಷ ಸೀಮಂತ ಕಾರ್ಯ ಮಾಡಿದ್ದಾರೆ.

ಇವರ ಮೊದಲ ಮಗಳು ಕುಟುಂಬಸ್ಥರ ವಿರೋಧದ ನಡುವೆಯೂ ಯುವಕನನ್ನು ಪ್ರೀತಿಸಿ ಓಡಿ ಹೋಗಿದ್ದು ಈ ರೀತಿ ಸೀಮಂತ ಮಾಡಲು ಕಾರಣ. ಮಗಳ ನಿರ್ಧಾರದಿಂದ ಬೇಸರಗೊಂಡ ತಾಯಿ ಗೀತಾ, ಮೊದಲನೇ ಮಗಳು ಓಡಿ ಹೋದ ದಿನದಂದೇ ಮೇಕೆ ಮರಿ ತಂದಿದ್ದಾರಂತೆ.

ಪ್ರೀತಿಸಿ ಓಡಿಹೋದ ಮಗಳ ಮೇಲಿನ ಸಿಟ್ಟಿಗೆ ಮೇಕೆಗೆ ಸೀಮಂತ ಮಾಡಿದ ತಾಯಿ

ಇಂದು ತಾವು ಸಾಕಿದ ಮೇಕೆಗೆ ಸೀಮಂತ ಮಾಡಿ ತಾಯಿ, ಮಗಳ ಪ್ರೀತಿಯನ್ನು ಮೇಕೆಗೆ ಧಾರೆ ಎರೆದಿದ್ದಾರೆ. ಮಗಳು ಓಡಿ ಹೋಗಿದ್ದಾಳೆ, ಹೀಗಾಗಿ ಅವಳಿಗೆ ಮಾಡುವ ಸೀಮಂತ ಕಾರ್ಯವನ್ನು ಮೇಕೆಗೆ ಮಾಡಿದ್ದೇವೆ ಎಂದು ಮೇಕೆ ಮಾಲೀಕರಾದ ಗೀತಾ ಹೇಳುತ್ತಾರೆ.

ಇದನ್ನೂ ಓದಿ: ಬೆಂಗಳೂರು: ಕೋವಿಡ್ ಲಸಿಕೆ ಪಡೆದ 103 ವರ್ಷದ ಹಿರಿಜೀವ

ಇವರ ಮೊದಲ ಮಗಳಿಗೆ ಇಷ್ಟ ಎಂದು ಮೇಕೆ ಮರಿ ತಂದಿದ್ದಾರೆ. ಹೀಗಾಗಿ ಮೊದಲ ಮಗಳಿಗೆ ಮಾಡಬೇಕಿದ್ದ ಸೀಮಂತ ಕಾರ್ಯವನ್ನು ಎರಡನೇ ಮಗಳು ರಜನಿ ಆಸೆಯಂತೆ ಪ್ರೀತಿಯಿಂದ ಸಾಕಿದ ಮೇಕೆಗೆ ಮಾಡಿ, ಬಂದು ಬಳಗಕ್ಕೆ ಸಿಹಿ ಊಟ ಹಾಕಿಸಿದ್ದಾರೆ.

Last Updated : Mar 10, 2021, 1:07 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.