ETV Bharat / state

ಯುವತಿಯಿಂದ ಬೆತ್ತಲೆ ವೀಡಿಯೊ ಕಾಲ್: ಹನಿಟ್ರ್ಯಾಪ್ ದೂರು ನೀಡಿದ ಶಾಸಕ ತಿಪ್ಪಾರೆಡ್ಡಿ

ಅಕ್ಟೋಬರ್ 31 ರಂದು ಶಾಸಕ ತಿಪ್ಪಾರೆಡ್ಡಿಗೆ ಅಪರಿಚಿತ ಮಹಿಳೆಯಿಂದ ಕರೆ ಬಂದಿತ್ತು. ಆರಂಭದಲ್ಲಿ ಮಾಮೂಲಿ ಕರೆ ಮಾಡಿದ್ದು, ನಂತರ ವಾಟ್ಸಾಪ್ ನಲ್ಲಿ ವಿಡಿಯೋ ಕಾಲ್ ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿಯಿಂದ ಬೆತ್ತಲೆ ವೀಡಿಯೊ ಕಾಲ್: ಹನಿಟ್ರ್ಯಾಪ್ ದೂರು ನೀಡಿದ ಶಾಸಕ ತಿಪ್ಪಾರೆಡ್ಡಿ
Young woman tried to honey trap me says Ktaka BJP MLA
author img

By

Published : Nov 2, 2022, 1:15 PM IST

ಚಿತ್ರದುರ್ಗ: ಯುವತಿಯೊಬ್ಬಳು ನಗ್ನವಾಗಿ ಮಾಡಿದ ವಿಡಿಯೋ ಕಾಲ್‌ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ಬುಧವಾರ ತಿಳಿಸಿವೆ.

ಪೊಲೀಸ್ ಮೂಲಗಳ ಪ್ರಕಾರ, ಇದು ಹಿರಿಯ ರಾಜಕೀಯ ನಾಯಕನನ್ನು ಹನಿ ಟ್ರ್ಯಾಪ್ ಮಾಡಲು ಗ್ಯಾಂಗ್ ನಡೆಸಿದ ವ್ಯರ್ಥ ಪ್ರಯತ್ನವಾಗಿದೆ. ಘಟನೆಗೆ ಸಂಬಂಧಿಸಿದಂತೆ ಶಾಸಕರು ದೂರು ದಾಖಲಿಸಿದ್ದರಿಂದ ಈಗ ಹನಿಟ್ರ್ಯಾಪ್ ಗ್ಯಾಂಗ್​ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಅಕ್ಟೋಬರ್ 31 ರಂದು ಶಾಸಕ ತಿಪ್ಪಾರೆಡ್ಡಿಗೆ ಅಪರಿಚಿತ ಮಹಿಳೆಯಿಂದ ಕರೆ ಬಂದಿತ್ತು. ಆರಂಭದಲ್ಲಿ ಮಾಮೂಲಿ ಕರೆ ಮಾಡಿದ್ದು, ನಂತರ ವಾಟ್ಸಾಪ್‌ನಲ್ಲಿ ವಿಡಿಯೋ ಕಾಲ್ ಮಾಡಿದ್ದಾರೆ. ಆದರೆ ಆ ಕಡೆ ಹಿಂದಿಯಲ್ಲಿ ಮಾತನಾಡುತ್ತಿದ್ದ ಬೆತ್ತಲೆ ಮಹಿಳೆಯೊಬ್ಬಳನ್ನು ಕಂಡು ಬಿಜೆಪಿ ಮುಖಂಡ ಬೆಚ್ಚಿಬಿದ್ದಿದ್ದಾರೆ. ಇದರ ನಂತರ ಶಾಸಕರು ಕೂಡಲೇ ಕಾಲ್ ಕಟ್ ಮಾಡಿದ್ದಾರೆ. ಇದಾದ ನಂತರ ಆ ಮೊಬೈಲ್ ನಂಬರ್​​ನಿಂದ ಹಲವು ಪೋರ್ನ್ ವಿಡಿಯೋಗಳು ಬಂದಿದ್ದವು. ಶಾಸಕರು ಎಲ್ಲಾ ವಿಡಿಯೋಗಳನ್ನು ಅಳಿಸಿ ನಂಬರ್ ಬ್ಲಾಕ್ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನೆಯ ನಂತರ ಶಾಸಕ ತಿಪ್ಪಾರೆಡ್ಡಿ ಚಿತ್ರದುರ್ಗ ಸೈಬರ್ ಪೊಲೀಸರಿಗೆ ದೂರು ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Exclusive ಸಿಹಿ ಮಾತಿನ ಚಂದುಳ್ಳಿ ಚೆಲುವೆ ಆಗ್ತಾಳೆ ಬೆತ್ತಲೆ; ಮರುಳಾದ್ರೆ ನಿಮ್ಮ ಬಾಳು ಕತ್ತಲೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.