ಚಿತ್ರದುರ್ಗ: ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಗ್ರಾಮಗಳಿಗೆ ತೆರಳಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಗ್ರಾಮ ಪಂಚಾಯತಿ ವ್ಯಾಪ್ತಿಯ ಮನೆಗಳಿಗೆ ತೆರಳಿದ ಶಾಸಕರು, ಜನರಿಗೆ ಹಾಲು, ಹಣ್ಣು, ಆಹಾರ, ದವಸ ಧಾನ್ಯ ವಿತರಿಸಿ, ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಮನವಿ ಮಾಡಿದರು.
ಅಲ್ಲದೇ ಆರೋಗ್ಯ ತಪಾಸಣೆ ಮಾಡಲು ಬರುವ ಸಮಯದಲ್ಲಿ ವೈದ್ಯರಿಗೆ ಸ್ಪಂದಿಸಿ ಎಂದು ಅವರು ಸಲಹೆ ನೀಡಿದರು.