ETV Bharat / state

ಚಳ್ಳಕೆರೆಯಲ್ಲಿ ಮರ್ಡರ್​​.. ಮದ್ಯ ಸೇವನೆಗೆ ಹಣ ನೀಡಲಿಲ್ಲವೆಂದು ಹೆಂಡತಿಯನ್ನೇ ಕೊಂದ ಪಾಪಿ ಪತಿ - chitradurga murder news

ಹೆಂಡತಿ ಬಳಿ ಗಂಡ ಮದ್ಯಕ್ಕೆ ಹಣ ನೀಡುವಂತೆ ಪೀಡಿಸಿದ್ದಾನೆ. ಆಕೆ ನಿರಾಕರಿಸಿದಾಗ ಕೋಪದಲ್ಲಿ ಪತ್ನಿಯನ್ನು ಕೊಂದಿರುವ ಘಟನೆ ಚಳ್ಳಕೆರೆ ತಾಲೂಕಿನ ರೇಣುಕಾಪುರ ಗ್ರಾಮದಲ್ಲಿ ನಡೆದಿದೆ.

man murder his wife at chitradurga
ಚಿತ್ರದುರ್ಗ ಕೊಲೆ ಪ್ರಕರಣ
author img

By

Published : Nov 2, 2021, 10:49 AM IST

ಚಿತ್ರದುರ್ಗ: ಮದ್ಯ ಸೇವನೆಗೆ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಹೆಂಡತಿಯನ್ನೇ ಹೊಡೆದು ಕೊಂದಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ರೇಣುಕಾಪುರ ಗ್ರಾಮದಲ್ಲಿ ನಡೆದಿದೆ. ಪಾಲಕ್ಷಾ (23) ಮೃತ ಪತ್ನಿ, ಶಿವಣ್ಣ (27) ಕೊಲೆ ಆರೋಪಿ.

ಕಳೆದ ಏಳೆಂಟು ದಿನಗಳಿಂದ ಪ್ರತಿನಿತ್ಯ ಶಿವಣ್ಣ ಮತ್ತು ಪಾಲಕ್ಷಾ ಅವರ ನಡುವೆ ಜಗಳ ಆಗುತ್ತಿತ್ತು. ಶಿವಣ್ಣ ತಮ್ಮ ಇಬ್ಬರು ಮಕ್ಕಳನ್ನು ಸಂಬಂಧಿಕರ ಮನೆಗೆ ಆಟವಾಡಲು ಬಿಟ್ಟು ಪಾಲಕ್ಷಾ ಅವರನ್ನು ತೋಟದ ಮನೆಗೆ ಕರೆದುಕೊಂಡು ಹೋಗಿ, ಅಲ್ಲಿ ಮದ್ಯಪಾನಕ್ಕಾಗಿ ಹಣ ಕೇಳಿದ್ದಾನೆ. ಆಗ ಪಾಲಾಕ್ಷ ಹಣ ಕೊಡುವುದಿಲ್ಲ ಎಂದಾಗ ಹಣವನ್ನು ಕಿತ್ತುಕೊಳ್ಳಲು ಹೋದ ಸಮಯದಲ್ಲಿ ಪತ್ನಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆ ವೇಳೆ ಅವರ ಎದೆಗೆ ಹೊಡೆದಿದ್ದಾನೆ. ಪರಿಣಾಮ, ಪತ್ನಿ ಪ್ರಜ್ಞೆ ತಪ್ಪಿ ಬಿದ್ದು ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಅವಕಾಶವಿಲ್ಲದಿದ್ದರೂ ಅಪ್ಪು ಸಮಾಧಿಯತ್ತ ಧಾವಿಸುತ್ತಿರುವ ಅಭಿಮಾನಿ ಬಳಗ

ಭಯಗೊಂಡ ಪತಿ, ಪತ್ನಿಯ ಕುತ್ತಿಗೆಗೆ ಸೀರೆ ಕಟ್ಟಿ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಬಿಂಬಿಸಿಲು ಹೋಗಿ ಇದೀಗ ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ನೋಡಿದ್ದ ಶಿವಣ್ಣನ ತಮ್ಮ ಎಲ್ಲರಿಗೂ ಮಾಹಿತಿ ನೀಡಿದ್ದು, ಇದೀಗ ಮೃತ ಪಾಲಕ್ಷಾ ಅವರ ಪೋಷಕರು ತಳಕು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಯನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.