ಚಿತ್ರದುರ್ಗ: ಪುಲ್ವಾಮ ಘಟನೆ ಸಂಭವಿಸಿ ಇಂದಿಗೆ ಒಂದು ವರ್ಷ ಕಳೆದ ಹಿನ್ನೆಲೆಯಲ್ಲಿ ಕಂಥಕ ಫೌಂಡೇಶನ್ ವತಿಯಿಂದ ಮಾದಾರ ಗುರುಪೀಠದ ಮಾದಾರಚೆನ್ನಯ್ಯ ಸ್ವಾಮೀಜಿ ಒನಕೆ ಓಬವ್ವ ವೃತ್ತದಲ್ಲಿ ಮೌನಾಚರಣೆ ಮಾಡಿ, ಗಿಡ ನೆಡುವ ಮೂಲಕ ಸೈನಿಕರಿಗೆ ಗೌರವ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ನಮ್ಮ ದೇಶದಲ್ಲಿ ದೇವರ ನಂತರ ಪೂಜೆ ಸಲ್ಲುಸುವುದು ದೇಶದ ಬೆನ್ನೆಲುಬಾದ ರೈತರಿಗೆ ಮತ್ತು ದೇಶವನ್ನು ಕಾಯುವ ಯೋಧರಿಗೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಪುಲ್ವಾಮ ದಾಳಿಯಲ್ಲಿ ನಮ್ಮ ಯೋಧರು ವೀರ ಮರಣ ಹೊಂದಿದರು. ಅವರನ್ನು ಸ್ಮರಣೆ ಮಾಡುವುದು ಭಾರತೀಯರಾಗಿರುವ ನಮ್ಮೆಲ್ಲರ ಕರ್ತವ್ಯ. ಅವರುಗಳ ಹೆಸರು ಚಿರಸ್ಥಾಯಿಯಾಗಬೇಕು ಎಂಬ ನಿಟ್ಟಿನಲ್ಲಿ ಕಂಥಕ ಪೌಂಡೇಶನ್ನವರು ಸಸಿ ನೆಡುವ ಕಾರ್ಯಕ್ರಮ ಮಾಡುತ್ತಿರುವುದು ಉತ್ತಮ ಕಾರ್ಯ ಶ್ಲಾಘಿಸಿದರು.