ETV Bharat / state

ಚಿರತೆ ದಾಳಿಗೆ 15 ಕುರಿಮರಿಗಳು ಬಲಿ: ಕುರಿಗಾಹಿ ಕಂಗಾಲು - ಕುರಿಮರಿಗಳು ಸಾವು

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕಸ್ತೂರಂಗಪ್ಪನಹಳ್ಳಿಯಲ್ಲಿ ಚಿರತೆ ದಾಳಿಯಿಂದ 15 ಕ್ಕೂ ಹೆಚ್ಚು ಕುರಿಮರಿಗಳು ಸಾವನ್ನಪ್ಪಿವೆ.

leopard kills 15 lambs in chitradurga
ಚಿರತೆ ದಾಳಿಯಿಂದ 15 ಕುರಿಮರಿಗಳು
author img

By

Published : Oct 21, 2021, 4:41 PM IST

ಚಿತ್ರದುರ್ಗ: ಚಿರತೆ ದಾಳಿಯಿಂದ 15 ಕ್ಕೂ ಹೆಚ್ಚು ಕುರಿಮರಿಗಳು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕಸ್ತೂರಂಗಪ್ಪನಹಳ್ಳಿಯಲ್ಲಿ ನಡೆದಿದೆ.

leopard kills 15 lambs in chitradurga
15 ಕುರಿಮರಿಗಳು ಬಲಿ

ಕಸ್ತೂರಂಗಪ್ಪನಹಳ್ಳಿ ಗ್ರಾಮದ ಕುರಿಗಾಹಿ ರಾಜಪ್ಪ ಅವರಿಗೆ ಸೇರಿದ 15 ಕುರಿಮರಿಗಳನ್ನು ಕುರಿ ಅಟ್ಟಿಗೆ ನುಗ್ಗಿ ಚಿರತೆ ಸಾಯಿಸಿದೆ. ಕುರಿಗಳ ಸಾವಿನಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಕುರಿಗಳನ್ನು ಸಾಕಿ ಬದುಕು ಕಟ್ಟಿಕೊಂಡಿದ್ದ ರಾಜಪ್ಪ ಈ ದುರ್ಘಟನೆಯಿಂದ ಕುಗ್ಗಿ ಹೋಗಿದ್ದಾರೆ. ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

leopard kills 15 lambs in chitradurga
ಚಿರತೆ ದಾಳಿಯಿಂದ 15 ಕುರಿಮರಿಗಳು ಸಾವು

ಇದನ್ನೂ ಓದಿ:ಉಳ್ಳಾಲ: ಬಂಧಿಸಲು ಹೋದ ಪೊಲೀಸರಿಗೇ ತಲ್ವಾರ್​ ತೋರಿಸಿ ರೌಡಿ ಶೀಟರ್ ಎಸ್ಕೇಪ್

ಗ್ರಾಮಸ್ಥರು ರಾಜಪ್ಪನ ಪರಿಸ್ಥಿತಿ ಕಂಡು ಸ್ಥಳೀಯ ಶಾಸಕಿಯಾದ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ತಿಳಿಸಿದ್ದಾರೆ. ಸ್ಥಳ ಪರಿಶೀಲನೆ ಮಾಡಿದ ಶಾಸಕಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ತಿಳಿಸಿ ರಾಜಪ್ಪ ಅವರಿಗೆ ಪರಿಹಾರ ನೀಡುವಂತೆ ಹೇಳುತ್ತೇನೆ ಎಂದು ಭರವಸೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.