ETV Bharat / state

ತಾಕತ್ ಇದ್ದರೆ ಆರ್​ಎಸ್​ಎಸ್​, ಬಜರಂಗದಳ ಬ್ಯಾನ್ ಮಾಡಲಿ: ಕಲ್ಲಡ್ಕ ಪ್ರಭಾಕರ್

author img

By

Published : Jan 28, 2020, 4:24 PM IST

ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ದ್ವೇಷದ ರಾಜಕಾರಣ ಮಾಡುತ್ತಿದ್ದು, ಅದು ಅವರಿಗೆ ಶೋಭೆ ತರುವುದಿಲ್ಲ ಎಂದು ಕಲ್ಲಡ್ಕ ಪ್ರಭಾಕರ್ ಹೇಳಿದ್ದಾರೆ.

Kalladka prabhakar
ಕಲ್ಲಡ್ಕ ಪ್ರಭಾಕರ್

ಚಿತ್ರದುರ್ಗ: ಹತ್ತೊಂಭತ್ತು ತಿಂಗಳು ಮುಖ್ಯಮಂತ್ರಿಯಾದವರು ಆರ್​ಎಸ್ಎಸ್, ಭಜರಂಗ ದಳ ಬ್ಯಾನ್ ಮಾಡ್ತೇನೆ ಎನ್ನುತ್ತಿದ್ದಾರೆ. ಅವರಿಗೆ ತಾಕತ್ ಇದ್ದರೆ ಸಂಘವನ್ನು ಬ್ಯಾನ್ ಮಾಡಲಿ ಎಂದು ಕಲ್ಲಡ್ಕ ಪ್ರಭಾಕರ್ ಮಾಜಿ ಸಿಎಂ ಕುಮಾರ್ ಸ್ವಾಮಿಯವರ ವಿರುದ್ದ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಕಲ್ಲಡ್ಕ ಪ್ರಭಾಕರ್

ಚಿತ್ರದುರ್ಗದಲ್ಲಿರುವ ಮಾದರ ಚನ್ನಯ್ಯ ಗುರು ಪೀಠಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ದ್ವೇಷದ ರಾಜಕಾರಣ ಮಾಡುತ್ತಿದ್ದು, ಅದು ಅವರಿಗೆ ಶೋಭೆ ತರುವುದಿಲ್ಲ. ಆರ್​ಎಸ್ಎಸ್ ಹಿಂದೂ ಸಮಾಜದ ರಕ್ಷಕ ಸಂಘವಾಗಿ ಕೆಲಸ ಮಾಡುತ್ತಿದ್ದು, ನಮ್ಮ ಮೇಲೆ ಮುಸ್ಲಿಂರು, ಕ್ರಿಶ್ಚಿಯನ್ನರು, ನಕ್ಸಲರು ಎಲ್ಲರೂ ಆಕ್ರಮಣ ಮಾಡುತ್ತಿದ್ದು, ರಕ್ಷಣೆ ಮಾಡುವವರು ಯಾರು ಎಂದು ಪ್ರಶ್ನಿಸಿದರು.

ಗೋ ಹತ್ಯೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಗೋಮಾತೆ ಹಾಗೂ ಹೆಣ್ಣನ್ನು ರಕ್ಷಿಸುವುದನ್ನು ನಮ್ಮ ಪ್ರಮುಖ ಆದ್ಯತೆ ಯಾಗಿದ್ದು, ಗೋ ರಕ್ಷಣೆ ಮಾಡುವ ಮೂಲಕ ಹೆಣ್ಣಿಗೆ ರಕ್ಷಣೆ ನೀಡುವ ಕೆಲಸವನ್ನು ಆರ್​ಎಸ್ಎಸ್ ಮಾಡುತ್ತಿದೆ ಎಂದರು.

ಪಿಎಫ್ಐ ಸಂಘಟನೆ ಬಗ್ಗೆ ಪ್ರತಿಕ್ರಿಯಿಸಿ ಸಂಘಟನೆಗೆ ಕೋಟ್ಯಂತರ ರೂಪಾಯಿ ಹಣ ಹರಿದು ಬರುತ್ತಿದ್ದು, ಸಿಮಿ, ಪಿಎಫ್ಐ ಸೇರಿದಂತೆ ಇತರೆ ಸಂಘಟನೆಗಳಿಗೆ ಹಲವು ವರ್ಷಗಳಿಂದ ಹಣ ಹರಿದು ಬರುತ್ತಿದೆ. ಈ ಸಂಘಟನೆಗಳು ಬ್ಯಾನ್ ಆದರೆ ಬೇರೆ ದೇಶದ್ರೋಹಿ ಸಂಘಟನೆಗಳು ಹುಟ್ಟಿಕೊಳ್ಳುತ್ತವೆ. ಸಿಮಿ‌ ಸಂಘಟನೆಗಳಿಂದ ದುಡ್ಡು ಹೆಚ್ಚಾಗಿ ಬರುತ್ತಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.