ಚಿತ್ರದುರ್ಗ: ಹಳ್ಳಿ ಹಳ್ಳಿಗಳಿಗೂ ಕೊರೊನಾ ಕಾಲಿಟ್ಟಿರೋದು ಜನರಲ್ಲಿ ಆತಂಕ ಮೂಡಿಸಿದ್ದು, ಜಿಲ್ಲೆಯಲ್ಲಿ ಕ್ಷೌರಿಕನೋರ್ವನಿಗೆ ಸೋಂಕು ತಗುಲಿರೋದು ಇಡೀ ನಗರವನ್ನೇ ಬೆಚ್ಚಿ ಬೀಳಿಸಿದೆ.
ಚಳ್ಳಕೆರೆ ಪಟ್ಟಣದ ಓರ್ವ ಕ್ಷೌರಿಕನಿಗೆ ಸೋಂಕು ತಗುಲಿದ್ದು, ಇಡೀ ನಗರವೇ ಸ್ತಬ್ಧವಾಗಿದೆ. ಆದ್ದರಿಂದ ಕಳೆದ ಎರಡು ದಿನಗಳಿಂದ ನಗರದಲ್ಲಿ ಯಾವುದೇ ಸಲೂನ್ ಶಾಪ್ ಕೂಡ ಓಪನ್ ಆಗಿಲ್ಲ. ಹಾಗಾಗಿ ಜನರು ಸಲೂನ್ ಶಾಪ್ಗಳತ್ತ ಆಗಮಿಸುವುದಕ್ಕೂ ಭಯ ಪಡುತ್ತಿದ್ದಾರೆ.
ಅಷ್ಟೇ ಅಲ್ಲದೆ ಆ ಕ್ಷೌರಿಕ ಎಷ್ಟು ಜನಕ್ಕೆ ಕಟಿಂಗ್ ಮಾಡಿದ್ದಾನೆ ಹಾಗೂ ಆತನ ಪ್ರಾಥಮಿಕ ಸಂಪರ್ಕದಲ್ಲಿ ಎಷ್ಟೆಲ್ಲಾ ಮಂದಿ ಇದ್ದಾರೆ ಎಂಬುದು ಜನರ ನಿದ್ದೆಗೆಡಿಸಿದೆ. ಸೋಂಕಿತನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿ ಇರೋರನ್ನು ಈಗಾಗಲೇ ಪತ್ತೆ ಹಚ್ಚಲಾಗಿದೆ. ಚಳ್ಳಕೆರೆ ಪಟ್ಟಣದಲ್ಲಿರೋ ಜನರನ್ನು ಒಟ್ಟಾರೆಯಾಗಿ ಮನೆ ಮನೆಗೆ ತೆರಳಿ ಚೆಕ್ ಮಾಡುವಂತಹ ಕೆಲಸ ಮಾಡುತ್ತಿದ್ದೇವೆ. ಅಲ್ಲೇನಾದರು ಕೊರೊನಾ ಶಂಕೆ ಕಂಡು ಬಂದಲ್ಲಿ ಅವರನ್ನು ಕೂಡಲೇ ಕ್ವಾರಂಟೈನ್ ಮಾಡಲಾಗ್ತಿದೆ. ILI ಮತ್ತು SARI ಸಂಪರ್ಕದಲ್ಲಿರೋ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಲಾಗಿದ್ದು, ಚಳ್ಳಕೆರೆ ನಗರದ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯಾಧಿಕಾರಿ ಅಭಯ ನೀಡಿದ್ದಾರೆ.