ಚಿತ್ರದುರ್ಗ: ಅನೈತಿಕ ಆದಾಯದ ಮೂಲವನ್ನು ಸರ್ಕಾರ ಹೊಂದುವುದು ಸರಿಯಲ್ಲ, ಅಂತಹ ಆದಾಯವನ್ನು ವ್ಯಕ್ತಿಯೂ ಹೊಂದಬಾರದು, ಸರ್ಕಾರ ಕೂಡ ಹೊಂದಬಾರದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಸಾಣೇಹಳ್ಳಿ ರಾಷ್ಟ್ರೀಯ ನಾಟಕೋತ್ಸವ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮದ್ಯ ಮಾರಾಟದಿಂದ ಸರ್ಕಾರಕ್ಕೆ ಹರಿದು ಬರುವ ಹಣದ ಬಗ್ಗೆ ಪ್ರತಿಕ್ರಿಯಿಸಿದರು. ಮದ್ಯಪಾನ ನಿಷೇಧಿಸುತ್ತೇವೆ, ಇದಕ್ಕಾಗಿ ಕ್ಯಾಬಿನೆಟ್ ಒಳಗೂ ಹಾಗೂ ಹೊರಗೂ ಧ್ವನಿ ಎತ್ತುತ್ತೇನೆ. ಮದ್ಯಪಾನ ನಿಷೇಧಕ್ಕಾಗಿ ನಮ್ಮ ಜೊತೆ ಜನಸಾಮಾನ್ಯರು ಧ್ವನಿಯಾಗಿ ನಿಲ್ಲಬೇಕು ಎಂದರು.
ಮದ್ಯಪಾನ ನಿಷೇಧಕ್ಕೆ ಜನರ ಮಾನಸಿಕ ಸಂಕಲ್ಪ ಕೂಡ ಮಹತ್ವದ್ದಾಗಿರುತ್ತದೆ. ಮಾನಸಿಕ ಸಂಕಲ್ಪವು ಬಹಿರಂಗ ಪ್ರತಿಜ್ಞೆಗಿಂತ ದೊಡ್ಡದು. ಅಲ್ಲದೆ ಜನಸಾಮಾನ್ಯರು ಧ್ವನಿಯಾಗಿ ನಿಂತರೆ ಯಾವ ಸರ್ಕಾರವೂ ಕೂಡ ಅನೈತಿಕ ಆದಾಯದ ಮೂಲವನ್ನು ಹುಡುಕುವುದಿಲ್ಲ ಎಂದು ಸಚಿವ ಸಿ ಟಿ ರವಿ ಅಭಿಪ್ರಾಯಪಟ್ಟರು.