ಚಿತ್ರದುರ್ಗ: ಮಹಿಳೆಯೊಬ್ಬರಿಗೆ ಎಂಡೋಸ್ಕೋಪಿ ಮೂಲಕ ಬ್ರೈನ್ ಟ್ಯೂಮರ್ ಶಸ್ತ್ರಚಿಕಿತ್ಸೆಯನ್ನು(free brain tumor operation) ಬಸವೇಶ್ವರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯರ ತಂಡವು ಯಶಸ್ವಿಯಾಗಿ ಮಾಡಿದೆ.
ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಈ ಬಗ್ಗೆ ಮಾಧ್ಯಮಗೋಷ್ಟಿ ನಡೆಸಲಾಯ್ತು. ಜಿಲ್ಲೆಯ ಚಳ್ಳಕೆರೆ ತಾಲೂಕಿನ ಘಟಪರ್ತಿ ಗ್ರಾಮದ ಪಾಲಮ್ಮ ಎಂಬುವರು ಅನಾರೋಗ್ಯದಿಂದ ಬಳಲುತ್ತಿದ್ದರು. ಶಸ್ತ್ರಚಿಕಿತ್ಸೆ ನಂತರ ಆರೋಗ್ಯವಾಗಿದ್ದಾರೆ ಎಂದು ತಂಡದ ವೈದ್ಯ ಕಿರಣ್ ಹೇಳಿದರು.
ಘಟಪರ್ತಿಯ ಪಾಲಕ್ಕ ಜ್ವರ ಮತ್ತು ತಲೆ ಸುತ್ತು ಎಂದು ಮತ್ತೆ ಚಿಕಿತ್ಸೆ ಪಡೆಯಲು ಬಂದಿದ್ದರು. ಅವರಿಗೆ ನಮ್ಮ ತಂಡ ಚಿಕಿತ್ಸೆ ನೀಡಲು ಪರೀಕ್ಷಿಸಿದಾಗ ಅವರಿಗೆ ಗಂಭೀರವಾಗಿ ಡೆಂಗ್ಯೂ ಜ್ವರವಿರುವುದು ಪತ್ತೆಯಾಗಿತ್ತು. ಅವರಿಗೆ ಒಂದು 1 ಲಕ್ಷದ 50 ಸಾವಿರ ಪ್ಲೇಟ್ಲೆಟ್ ಸೆಲ್ಸ್(platelet cell count) ಬದಲಿಗೆ ಕೇವಲ 15 ಸಾವಿರಕ್ಕೆ ಬಂದಿತ್ತು. ಇಂತವರಿಗೆ ನಾವು ಉತ್ತಮ ಚಿಕಿತ್ಸೆ ನೀಡಿ ಪ್ಲೇಟ್ಲೆಟ್ಸ್ ಹೆಚ್ಚಾಗುವಂತೆ ಮಾಡಿದೆವು. ಆದರೆ ಅವರ ತಲೆ ಸುತ್ತು ಮಾತ್ರ ಕಡಿಮೆಯಾಗಲೇ ಇಲ್ಲ.
ಇದರಿಂದ ನಾವು ಅವರನ್ನು ನರರೋಗ ತಜ್ಞರಿಂದ ಪರೀಕ್ಷಿಸಿದಾಗ ಅವರಿಗೆ ಪಿಟ್ಯೂಟರಿ ಗ್ರಂಥಿಯ ಮೇಲೆ ಒಂದು ಟ್ಯೂಮರ್(tumor) ಬೆಳೆದಿರುವುದು ತಿಳಿದು ಬಂತು. ಆಗ ಎಲ್ಲಾ ನಾಲ್ಕು ವಿಭಾಗಗಳ ವೈದ್ಯರು ಚರ್ಚಿಸಿ ಅವರಿಗೆ ಎಂಡೋಸ್ಕೋಪಿ (endoscopy) ಮೂಲಕ ಟ್ಯೂಮರ್ ಅನ್ನು ಹೊರ ತೆಗೆದೆವು ಎಂದು ವಿವರಿಸಿದರು.
ಇದನ್ನು ಹೊರಗೆ ಮಾಡಿಸಿದ್ದರೆ ಇದರ ಖರ್ಚು ಸುಮಾರು ನಾಲ್ಕರಿಂದ ಐದು ಲಕ್ಷ ಹಣ ಖರ್ಚಾಗುತ್ತದೆ. ಆದರೆ ನಾವು ಇಲ್ಲಿ ಯಾವುದೇ ಹಣ ಪಡೆಯದೆ ಉಚಿತವಾಗಿ ಮಾಡಿದ್ದೇವೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಬಸವೇಶ್ವರ ವೈದ್ಯಕೀಯ ಸಂಶೋಧನಾ ಕೇಂದ್ರ ಮತ್ತು ಆಸ್ಪತ್ರೆ ಇರುವುದು ಬಡವರಿಗಾಗಿ ಎಂದು ಇದೇ ವೇಳೆ ತಿಳಿಸಿದ್ರು.