ಚಿತ್ರದುರ್ಗ: ಇತಿಹಾಸ ತೆಗೆದು ನೋಡಲಿ, ರಾಜ್ಯದಲ್ಲಿ ಅನೇಕ ಐಟಿ, ಇಡಿ ದಾಳಿ ಆಗಿವೆ. ಕಾನೂನು ಎಲ್ಲರಿಗೂ ಒಂದೇ. ಒಬ್ಬರಿಗೊಂದೊಂದು ನೀತಿಯಿಲ್ಲ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಪರವಾಗಿ ನಡೆದ ಒಕ್ಕಲಿಗರ ಪ್ರತಿಭಟನೆಗೆ ಸಚಿವ ಶ್ರೀ ರಾಮುಲು ಟಾಂಗ್ ನೀಡಿದರು.
ಚಿತ್ರದುರ್ಗದಲ್ಲಿರುವ ಮಾದಾರ ಚನ್ನಯ್ಯ ಮಠದಲ್ಲಿ ಅಹಿಂದ ಮಠಾಧೀಶರ ಸಭೆ ಆರಂಭಕ್ಕೂ ಮುನ್ನ ಮಾತನಾಡಿದ ಅವರು, ಕಾನೂನು ಇಂದು ಎತ್ತರದ ಮಟ್ಟದಲ್ಲಿ ಇದೆ. ಡಿ.ಕೆ.ಶಿವಕುಮಾರ್ಗಾಗಿ ಕಾನೂನು ಕೆಳಗಿಳಿಸಲಾಗದು. ಕಾನೂನು ರೀತಿ ಏನಾಗಬೇಕು ಅದು ಆಗುತ್ತಿದೆ ಎಂದರು.
ಕಾನೂನು ಬಗ್ಗೆ ಮಾತಾಡಿ ನಾನು ದೊಡ್ಡಸ್ತಿಕೆ ತೋರಿಸಲ್ಲ. ಒಕ್ಕಲಿಗ ಸಮುದಾಯದವರಿಗೆ ಡಿಕೆಶಿ ಬಂಧನದಿಂದ ನೋವಾಗಿ ಹೋರಾಟ ಮಾಡುತ್ತಿರಬಹುದು. ಹೋರಾಟ ಮಾಡಿದ್ರು ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಮಾಡದೆ ಹೋರಾಟ ಮಾಡುವಂತೆ ಆರೋಗ್ಯ ಸಚಿವ ಶ್ರೀ ರಾಮುಲು ಪ್ರತಿಭಟನಕಾರರಲ್ಲಿ ಮನವಿ ಮಾಡಿದರು.