ETV Bharat / state

ಕಂಟೇನ್ಮೆಂಟ್-ಸೀಲ್ ಡೌನ್ ಮನೆಗಳಿಗೆ ದಿನಬಳಕೆ ವಸ್ತುಗಳ ಸರಬರಾಜು ಹೇಗೆ?

author img

By

Published : Aug 28, 2020, 5:46 PM IST

Updated : Aug 28, 2020, 6:52 PM IST

ಚಿತ್ರದುರ್ಗ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಇನ್ನು ಇಲ್ಲಿ ಸೀಲ್​ಡೌನ್​ ಮಾಡಿದ ಮತ್ತು ಕಂಟೇನ್​ಮೆಂಟ್​ ಪ್ರದೇಶದಲ್ಲಿರುವ ಜನರಿಗೆ ದಿನ ಬಳಕೆ ವಸ್ತುಗಳನ್ನು ಪೂರೈಸುವುದು ಕಷ್ಟವಾಗಿದೆ.

ಚಿತ್ರದುರ್ಗ ವಿಶೇಷ ವರದಿ
ಚಿತ್ರದುರ್ಗ ವಿಶೇಷ ವರದಿ

ಚಿತ್ರದುರ್ಗ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ಸೋಂಕಿತರ‌ ಮನೆಗಳನ್ನು ಸೀಲ್​ಡೌನ್ ಮಾಡುವುದರಿಂದ ಮನೆಯಲ್ಲಿ ವಾಸವಾಗಿರುವವರಿಗೆ ದಿನ ಬಳಕೆ ವಸ್ತುಗಳು ಅವಶ್ಯಕವಾಗಿದ್ದು, ಆಹಾರ ಸಾಮಗ್ರಿಗಳನ್ನು ಸರಬರಾಜು ಮಾಡುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಸೀಲ್ ಡೌನ್ ಮನೆಗಳಿಗೆ ದಿನಬಳಕೆ ವಸ್ತುಗಳ ಸರಬರಾಜು ಕಷ್ಟ

ಜಿಲ್ಲೆಯಲ್ಲಿ ಈವರೆಗೆ 2,132 ಸೋಂಕಿತರು ಪತ್ತೆಯಾಗಿದ್ದು, 1522 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನುಳಿದ 582 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೋಂ ಐಸೋಲೇಷನ್​ನಲ್ಲಿರುವ ಸೋಂಕಿತರಿಗೆ ಹಾಗು ಸೀಲ್​ಡೌನ್ ಮಾಡಿದ ಮನೆಗಳಿಗೆ ದಿನಬಳಕೆ ವಸ್ತುಗಳು, ಆಹಾರ ಸಾಮಗ್ರಿಗಳು ಅತ್ಯವಶ್ಯಕವಾಗಿವೆ. ಕಂಟೇನ್ಮೆಂಟ್ ವಲಯವನ್ನು ಈಗಾಗಲೇ ಸರ್ಕಾರ ರದ್ದುಪಡಿಸಿದ್ದು, ಅದರ ಬದಲಾಗಿ ಸೋಂಕಿತರ ಮನೆಗೆ ಮಾತ್ರ ಸೀಲ್​ಡೌನ್ ಮಾಡಿ ಯಾರು ಮನೆ ಬಳಿ ಸುಳಿಯದಂತೆ ಸೂಚಿಸಲಾಗಿದೆ. ಇದರಿಂದ ಅಂತಹ ಮನೆಗಳಿಗೆ ದಿನನಿತ್ಯ ಬಳಕೆಯ ವಸ್ತುಗಳು ಅವಶ್ಯಕವಾಗಿದ್ದು, ಆಹಾರ ಸಾಮಗ್ರಿಗಳನ್ನು ಹಾಗು ದಿನಬಳಕೆಯ ವಸ್ತುಗಳನ್ನು ತಂದುಕೊಡುವುದಕ್ಕೂ ಜನಸಾಮಾನ್ಯರು ಹಿಂದೇಟು ಹಾಕುತ್ತಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿರುವವರು ಹಾಗೂ ಸೀಲ್​ಡೌನ್ ಮಾಡಿದ ಮನೆಯವರು ಪೇಚಿಗೆ ಸಿಲುಕಿದ್ದಾರಂತೆ. ಈ ಹಿಂದೆ ಕಂಟೇನ್ಮೆಂಟ್ ವಲಯಗಳಲ್ಲಿ ಜಿಲ್ಲಾಡಳಿತವೇ ಅವಶ್ಯಕವಾದ ಸಾಮಗ್ರಿಗಳನ್ನು ಪೂರೈಸುತ್ತಿತ್ತು. ಇದೀಗ ಸೋಂಕಿತರ ಮನೆಯನ್ನು ಮಾತ್ರ ಸೀಲ್​ಡೌನ್ ಮಾಡಲಾಗುತ್ತಿದೆ. ಹೀಗಾಗಿ ಇತರರಿಗೆ ಸಮಸ್ಯೆ ಉಂಟಾಗುವುದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.

ಈ ಹಿಂದೆ ಕಂಟೇನ್ಮೆಂಟ್ ವಲಯದಲ್ಲಿ ವಾಸವಾಗಿದ್ದವರು ಇಂತಹ ತೊಂದರೆಗೊಳಗಾಗಿ ವನವಾಸ ಅನುಭವಿಸಿದ್ದರಂತೆ. ಆದರೆ ಇದೀಗ ಸೀಲ್​ಡೌನ್ ಮಾಡಿದ ಮನೆಗಳಿಗೆ ಹಾಗೂ ಈ ಹಿಂದೆ ಇದ್ದ ಕಂಟೇನ್ಮೆಂಟ್ ವಲಯದಲ್ಲಿ ವಾಸಿಸುವವರಿಗೆ ಅವರವರ ಸಂಬಂಧಿಕರು (ಪ್ರಾಥಮಿಕ ಸಂಪರ್ಕದಲ್ಲಿ ಇಲ್ಲದ ಸಂಬಂಧಿಕರು) ಇವರಿಗೆ ಬೇಕಾದ ಸಾಮಗ್ರಿಗಳನ್ನು ಕಿರಾಣಿ ಅಂಗಡಿಯಲ್ಲಿ ಕೊಳ್ಳುವ ಮೂಲಕ ಸರಬರಾಜು ಮಾಡುತ್ತಾ ಬಂದಿದ್ದಾರೆ ಎನ್ನುತ್ತಾರೆ ಕಂಟೇನ್ಮೆಂಟ್ ವಲಯದಲ್ಲಿದ್ದ ನಿವಾಸಿಯೊಬ್ಬರು.

ಒಟ್ಟಾರೆ ಜಿಲ್ಲೆಯಲ್ಲಿ ಒಟ್ಟು 549 ಕಂಟೇನ್ಮೆಂಟ್ ಝೋನಗಳಿದ್ದು, ಈ ಎಲ್ಲಾ ವಲಯಗಳಿಗೆ ಯಾವುದೇ ಏಜೆನ್ಸಿಗಳಾಗಲಿ ಅಥವಾ ಸಂಘ-ಸಂಸ್ಥೆಗಳಾಗಲಿ ಆಹಾರ ಸಾಮಗ್ರಿಗಳನ್ನು ಒದಗಿಸಲು ಮುಂದೆ ಬಂದಿಲ್ಲವಂತೆ‌. ಎಲ್ಲಾ ವಲಯಗಳಲ್ಲಿ ಇದೇ ಸಮಸ್ಯೆ ಉದ್ಭವಿಸಿದ್ದು, ದಿನ ಬಳಕೆಯ ವಸ್ತುಗಳ ಅವಶ್ಯಕತೆ ಇರುವುದರಿಂದ ಕೆಲವರು ಭಾರೀ ತೊಂದರೆಗೊಳಗಾಗಿರುವುದಂತು ಸುಳ್ಳಲ್ಲ.

Last Updated : Aug 28, 2020, 6:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.