ಚಿತ್ರದುರ್ಗ: ಸಾಲಬಾಧೆ ತಾಳಲಾರದೆ ರೈತ ನೇಣಿಗೆ ಶರಣಾಗಿರುವ ಘಟನೆ ಹೊಸದುರ್ಗ ತಾಲೂಕಿನ ಬನಸಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬನಸಿಹಳ್ಳಿ ಗ್ರಾಮದ ನಿವಾಸಿ ಜಯಪ್ಪ (42) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ರೈತ. ಎರಡು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಮತ್ತು ಅಡಿಕೆ ಬೆಳೆ ಫಸಲು ನಷ್ಟ ಹಾಗೂ ಬೋರ್ ನಲ್ಲಿ ನೀರಿಲ್ಲದೆ ಬೆಳೆ ಸಂಪೂರ್ಣ ಒಣಗಿಹೋದ ಹಿನ್ನೆಲೆ ಮನನೊಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳೆ ಹಾನಿಯಿಂದ 5 ಲಕ್ಷಕ್ಕೂ ಅಧಿಕ ಬ್ಯಾಂಕ್ ಸಾಲ ಮತ್ತು ಕೈಗಡ ಸಾಲ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.
ದಿನದಿಂದ ದಿನಕ್ಕೆ ಸಾಲ ಮತ್ತು ಸಾಲಕ್ಕೆ ಬಡ್ಡಿ ಹೆಚ್ಚಳವಾದ ಹಿನ್ನೆಲೆ ರೈತ ಜಯಪ್ಪ ನೇಣಿಗೆ ಕೊರಳೊಡ್ಡಿದ್ದಾನೆ. ಈ ಸಂಬಂಧ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.