ETV Bharat / state

ವಡೇರಹಳ್ಳಿಯಲ್ಲಿ ಗಾಂಜಾ ಬೆಳೆದಿದ್ದ ಪ್ರಕರಣ: ನಾಲ್ವರು ಆರೋಪಿಗಳ ಬಂಧನ - Rampur Police Station, Chitradurga

ಚಿತ್ರದುರ್ಗ ಜಿಲ್ಲೆಯಲ್ಲಿ 4 ಎಕರೆ ಜಮೀನು ಲೀಸ್​ಗೆ ಪಡೆದು ಗಾಂಜಾ ಬೆಳೆದಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

dsd
ನಾಲ್ವರ ಬಂಧನ
author img

By

Published : Nov 12, 2020, 12:39 PM IST

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ವಡೇರಹಳ್ಳಿ ಬಳಿ 4 ಎಕರೆಯಲ್ಲಿ ಗಾಂಜಾ ಬೆಳೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಪ್ರಮುಖ ಆರೋಪಿ ಸೇರಿ ನಾಲ್ವರನ್ನು ಬಂಧಿಸುವಲ್ಲಿ ರಾಂಪುರ ಪೊಲೀಸರು ಯಶಸ್ವಿಯಾಗಿದ್ದಾರೆ‌.

ಬಳ್ಳಾರಿ ಮೂಲದ ಪ್ರಮುಖ ಆರೋಪಿ ರುದ್ರೇಶ್, ಈತನ ಸಹೋದರ ಶಿವಕುಮಾರ್​, ಗಾಂಜಾ ಖರೀದಿಸಲು 2 ಲಕ್ಷ ರೂ. ಮುಂಗಡ ಹಣ ನೀಡಿದ್ದ ಬಳ್ಳಾರಿ ಜಿಲ್ಲೆಯ ಸಂಡೂರು ಮೂಲದ ಶ್ರೀನಿವಾಸ್, ಹನುಮಂತಪ್ಪನನ್ನು ಬಂಧಿಸಲಾಗಿದೆ.

4ಎಕರೆ ಜಮೀನು ಲೀಜ್​ ಪಡೆದು ಗಾಂಜಾ ಬೆಳೆದಿದ್ದ ರುದ್ರೇಶ್ ತಲೆಮರೆಸಿಕೊಂಡಿದ್ದ. ಸೆಪ್ಟೆಂಬರ್ 03 ರಂದು ಗಾಂಜಾ ವಶಕ್ಕೆ ಪಡೆದ ರಾಂಪುರ ಪೊಲೀಸರು ನಾಲ್ವರನ್ನು ಬಂಧಿಸಿದ್ದರು. ಇದೀಗ ಈ ಪ್ರಕರಣದಲ್ಲಿ ಒಟ್ಟು ಎಂಟು ಜನ ಆರೋಪಿಗಳು ಅಂದರ್ ಆಗಿದ್ದು, ಸೆಪ್ಟೆಂಬರ್​​ 03 ರಂದು ಸುಮಾರು 10 ಟನ್ ಗಾಂಜಾ ವಶಕ್ಕೆ ಪಡೆಯಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.