ETV Bharat / state

ರೈತರ ಮೇಲೆರೆಗಿದ ಕೊರೊನಾ ಮಹಾಮಾರಿ: ಮಾರುಕಟ್ಟೆಗೆ ಕೊಂಡೊಯ್ಯಲಾಗದೆ ಟನ್​ಗಟ್ಟಲೇ ಕರ್ಬೂಜ ಹಾಳು

author img

By

Published : Mar 31, 2020, 1:11 PM IST

ಚಿತ್ರದುರ್ಗದಲ್ಲಿ ಕಟಾವಿಗೆ ಬಂದ 40 ಟನ್​ ಕರ್ಬೂಜವನ್ನು ಮಾರುಕಟ್ಟೆಗೆ ಸಾಗಿಸಲಾಗದೆ ರೈತ ನಷ್ಟ ಅನುಭವಿಸಿದ್ದಾನೆ.

chitradurga
ಚಿತ್ರದುರ್ಗ

ಚಿತ್ರದುರ್ಗ: ಭಾರತ ಲಾಕ್ ಡೌನ್ ಆಗಿರುವ ಹಿನ್ನಲೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಕಟಾವಿಗೆ ಬಂದ ಕರ್ಬೂಜ ಹಣ್ಣುಗಳನ್ನು ಮಾರುಕಟ್ಟೆಗೆ ಕೊಂಡೊಯ್ಯಲಾಗದೆ ಹಾನಿಯಾಗಿ ಜಮೀನಿನಲ್ಲೇ ಕೊಳೆಯುವಂತ ಪರಿಸ್ಥಿತಿ ಚಳ್ಳಕೆರೆಯ ತಾಲೂಕಲ್ಲಿ ಕಂಡುಬಂದಿದೆ.

ಹುಲಿಕುಂಟೆ ಗ್ರಾಮದ ರೈತ ಎಂ. ಜಯಣ್ಣ 3 ಎಕರೆ ಜಮೀನಿನಲ್ಲಿ ಬೆಳೆದಿದ್ದ ಸುಮಾರು 40 ಟನ್‌ ಕರ್ಬೂಜ ಹಾನಿಯಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತ ಸ್ಥಿತಿ ನಿರ್ಮಾಣವಾಗಿದೆ. ಮಾತ್ರವಲ್ಲ, ಹಾಲಗೊಂಡನಹಳ್ಳಿಯಲ್ಲಿ ರೈತ ತಿಪ್ಪೇಸ್ವಾಮಿ ಎಂಬುವರು ಕೂಡ 4 ಎಕರೆಯಲ್ಲಿ ಸುಮಾರು 50 ಟನ್ ಕರ್ಬೂಜ ಕೂಡ ಹಾನಿಯಾಗಿದೆ.

ಕೊರೊನಾ ಭೀತಿಯಿಂದ ಸ್ತಬ್ಧವಾದ ದೇಶ.. ಮಾರುಕಟ್ಟೆಗೆ ಕೊಂಡೊಯ್ಯಲಾಗದೇ ಕರ್ಬೂಜ ಹಾಳು

ಇದೀಗ ಹಾನಿಯಾಗಿರುವ ಬೆಳೆಗೆ ಸರ್ಕಾರ ಪರಿಹಾರ ಕೊಡಬೇಕೆಂದು ನೊಂದ ರೈತರು ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.