ಚಿತ್ರದುರ್ಗ: ಚೆನ್ನೈನಿಂದ ಚಳ್ಳಕೆರೆ ಗ್ರಾಮೀಣ ಭಾಗಕ್ಕೆ ಬಂದಿದ್ದ ತಂದೆ-ಮಗಳಲ್ಲಿ ಕೊರೊನಾ ಕಂಡು ಬಂದಿದೆ. ಇದೀಗ ಆ ಗ್ರಾಮಗಳಲ್ಲಿ ಆತಂಕ ಮನೆ ಮಾಡಿದ್ದು, ಜಿಲ್ಲಾಡಳಿತ ಸೀಲ್ ಡೌನ್ ಮಾಡಿದೆ.
ಚಳ್ಳಕೆರೆ ತಾಲೂಕಿನ ಕೋಡಿಹಳ್ಳಿ ಗ್ರಾಮ ಇದೀಗ ಸಂಪೂರ್ಣ ಸೀಲ್ ಡೌನ್ ಆಗಿದ್ದು, ಕೊರೊನಾ ರೋಗಿಗಳ ಪ್ರಾಥಮಿಕ ಸಂಪರ್ಕದಲ್ಲಿದ್ದ 42 ಜನರನ್ನು ಜಿಲ್ಲಾಡಳಿತ ಕ್ವಾರಂಟೈನ್ ಮಾಡಿದೆ. ಚೆನ್ನೈನಿಂದ ಮೇ 5ರಂದು ಬಂದಿದ್ದ ಕೋಡಿಹಳ್ಳಿ ಗ್ರಾಮದ P-993 ಹೆಣ್ಣು (3 ವರ್ಷ) ಹಾಗೂ P -994 (29) ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆದ್ದರಿಂದ ಕೋಡಿಹಳ್ಳಿ ಹಾಗೂ ಚಿಕ್ಕೆಹಳ್ಳಿಗಳನ್ನು ಜಿಲ್ಲಾಡಳಿತ ಸೀಲ್ ಡೌನ್ ಮಾಡಿದೆ.
ಈ ಕುರಿತು ಮಾತನಾಡಿದ ಶಾಸಕ ಟಿ.ರಘುಮೂರ್ತಿ ಚಿಕ್ಕೆಹಳ್ಳಿಯಲ್ಲಿ ಆಂಧ್ರದ ಕಡೆಯಿಂದ ಜನ ಬರಬಹುದು ಎನ್ನುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ರಸ್ತೆಯನ್ನು ಬಂದ್ ಮಾಡಲಾಗಿದೆ. ಜಿಲ್ಲೆಯಲ್ಲಿ ಎಷ್ಟೇ ಕಟ್ಟುನಿಟ್ಟಿನಿಂದ ಲಾಕ್ಡೌನ್ ಪಾಲನೆ ಮಾಡಿದ್ರೂ ಈಗ ಕೊರೊನಾ ಸೋಂಕು ಬಂದಿರೋದು ಎಲ್ಲರಲ್ಲೂ ಆತಂಕ ಮೂಡಿಸಿದೆ ಎಂದರು.