ಚಿತ್ರದುರ್ಗ : ಜಿಲ್ಲೆಯ ಚಳ್ಳಕೆರೆ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯೆ ಜಯಲಕ್ಷ್ಮಿ ಕೃಷ್ಣಮೂರ್ತಿ ಅಧ್ಯಕ್ಷರಾಗಿ ಆಯ್ಕೆಯಾದರೆ, ಜೈತುನ್ ಬೀ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ನಗರಸಭೆಯ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರನ್ನು ಕಾಂಗ್ರೆಸ್ನ ಚಳ್ಳಕೆರೆ ಶಾಸಕ ಟಿ ರಘುಮೂರ್ತಿ ಅಭಿನಂದಿಸಿದರು. ನಗರಸಭೆಯಲ್ಲಿ ಒಟ್ಟು 31 ಸ್ಥಾನದ ಬಲವಿದ್ದು, ಅದರಲಲ್ಲಿ 16 ಸ್ಥಾನಗಳು ಕೈ ಪಕ್ಷದ ಪಾಲಾದ್ರೆ, ಜೆಡಿಎಸ್ ಪಕ್ಷ 10 ಸ್ಥಾನಗಳನ್ನು ಪಡೆದು 2ನೇ ಸ್ಥಾನ ಅಲಂಕರಿಸಿತು.
ಬಿಜೆಪಿ 4 ಸ್ಥಾನಗಳನ್ನು ಪಡೆದು 3ನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿತು. ಇಂದು ನಡೆದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಕಾಂಗ್ರೆಸ್ನ 16 ಸ್ಥಾನಗಳು, ಶಾಸಕ ಟಿ.ರಘುಮೂರ್ತಿ ಅವರ ಒಂದು ಮತ ಸೇರಿ ಒಟ್ಟು 17 ಮತಗಳು ಲಭಿಸಿದ್ದರಿಂದ ಅಧ್ಯಕ್ಷ-ಉಪಾಧ್ಯಕ್ಷರ ಗಾದಿ ಕಾಂಗ್ರೆಸ್ ಪಾಲಾಯಿತು.
ಶಾಸಕ ಟಿ ರಘುಮೂರ್ತಿ ಅವರು ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದವರನ್ನು, ಎಲ್ಲ ನಗರಸಭೆ ಸದಸ್ಯರುಗಳಿಗೆ ಅಭಿನಂದಿಸಿದರು.