ETV Bharat / state

ಎಂ‌ಟಿಬಿ ನೇತೃತ್ವದ ಸುದ್ದಿಗೋಷ್ಠಿಯಲ್ಲಿ ಕುರುಬ ಸಮಾಜದ ಕಡೆಗಣನೆ ಆರೋಪ: ಮುಖಂಡರ ನಡುವೆ ವಾಗ್ವಾದ - ಚಿತ್ರದುರ್ಗ ಸುದ್ದಿ

ಸಚಿವ ಎಂ‌ಟಿಬಿ ನೇತೃತ್ವದ ಸುದ್ದಿಗೋಷ್ಠಿಯಲ್ಲಿ ಕುರುಬ ಸಂಘದವರನ್ನು ಕಡೆಗಣಿಸಲಾಗಿದೆ ಎಂಬ ವಿಚಾರವಾಗಿ ಸಂಘದ ಮುಖಂಡರ ಮಧ್ಯೆಯೇ ವಾಗ್ವಾದ ನಡೆದಿದೆ.

Kuruba community
ಕುರುಬ ಸಮಾಜದ ಮುಖಂಡರ ನಡುವೆ ವಾಗ್ವಾದ
author img

By

Published : Jan 15, 2021, 12:27 PM IST

ಚಿತ್ರದುರ್ಗ: ಸಚಿವ ಎಂಟಿಬಿ ನಾಗರಾಜ ಸುದ್ದಿಗೋಷ್ಠಿ ವಿಚಾರವಾಗಿ ಕುರುಬ ಸಂಘದ ಮುಖಂಡರ ಮಧ್ಯೆ ವಾಗ್ವಾದ ನಡೆದಿದೆ.

ನಗರದ ಕಾಗಿನೆಲೆಯಿಂದ ಬೆಂಗಳೂರಿಗೆ ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ಪಾದಯಾತ್ರೆ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಹೊಟೇಲ್‌ನಲ್ಲಿ ಸಚಿವ ಎಂ‌ಟಿಬಿ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು. ಈ ವೇಳೆ, ಎಂ‌ಎಲ್‌ಸಿ ರೇವಣ್ಣ, ಕುರುಬ ಸಮಾಜದ ಮುಖಂಡ ಮುಕುಡಪ್ಪ ಕೂಡ ಉಪಸ್ಥಿತರಿದ್ದರು. ಆದರೆ ಸುದ್ದಿಗೋಷ್ಠಿಯಲ್ಲಿ ಕುರುಬ ಸಂಘಟನೆಗಳ ಮುಖಂಡರನ್ನು ಕಡೆಗಣಿಸಲಾಗಿದೆ ಎಂದು ಜನರ ಮಧ್ಯೆ ವಾಗ್ವಾದ ನಡೆದಿದೆ. ಎಂಎಲ್‌ಸಿ ರೇವಣ್ಣ ಸಮ್ಮುಖದಲ್ಲೇ ಕುರುಬ ಸಂಘಟನೆ ಮುಖಂಡರಾದ ಮಲ್ಲಿಕಾರ್ಜುನ ಮತ್ತು ಮಂಜಪ್ಪ ನಡುವೆ ವಾಗ್ವಾದ ನಡೆಸಿದ್ದಾರೆ.

ಇದನ್ನು ಓದಿ: ಸಿಡಿ ಇದ್ರೆ ಬಿಡುಗಡೆ ಮಾಡಲಿ.. ಯೋಗೇಶ್ವರಗೆ ಸಾಲ ನೀಡಿಲ್ಲ; ಸಚಿವ ಎಂಟಿಬಿ ನಾಗರಾಜ್

ಕುರುಬ ಸಂಘದ ಜಿಲ್ಲಾಧ್ಯಕ್ಷ ಶ್ರೀರಾಮ, ಪ್ರದೇಶ ಕುರುಬರ ಸಂಘದ ರಾಜ್ಯ ಉಪಾಧ್ಯಕ್ಷ ಬಿ.ಟಿ ಜಗದೀಶ್ ಅವರನ್ನ ಸುದ್ದಿಗೋಷ್ಠಿಯಲ್ಲಿ ಕಡೆಗಣನೆ ಮಾಡಿದ್ದಾರೆಂದು ಆರೋಪಿಸಿ ವಾಗ್ವಾದ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.