ETV Bharat / state

ಕೊರೊನಾ ಹಾಟ್‌ ಸ್ಪಾಟ್ ಆಗ್ತಿದೆಯೇ ಹಿರಿಯೂರು?: ಜನರಲ್ಲಿ ಮನೆ ಮಾಡಿದೆ ಆತಂಕ - chitradurga to become corona hotspot

ಹಿರಿಯೂರು ಪಟ್ಟಣದ ವೇದಾವತಿ ನಗರ ಹಾಗು ಅಜಾದ್ ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಕೊರೊನಾ ತಾಂಡವಾಡುತ್ತಿದೆ. ಇಲ್ಲಿನ ಎರಡು ನಗರಗಳನ್ನು ಮುಂಜಾಗ್ರತಾ ಕ್ರಮವಾಗಿ ಸೀಲ್ ಡೌನ್ ಮಾಡಲಾಗಿದೆ. ಇಲ್ಲಿಯವರೆಗೆ ಕೊರೊನಾ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಬಂದವರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿತ್ತು. ಹೀಗಾಗಿ ಜಿಲ್ಲೆಯ ಜನ ನಿರಾಳರಾಗಿದ್ದರು. ಆದರೀಗ‌ ಚಿತ್ರದುರ್ಗದಲ್ಲಿ ಸಮುದಾಯದತ್ತ ಹರಡುತ್ತಿದೆಯೇ‌ ಎಂಬ ಮಾತುಗಳು ಕೇಳಿ ಬರುತ್ತಿದೆ.

corona
ಹಿರಿಯೂರು
author img

By

Published : Jun 29, 2020, 6:04 PM IST

ಚಿತ್ರದುರ್ಗ: ಕೊರೊನಾ ಇಷ್ಟು ದಿನಗಳಲ್ಲಿ ಹೊರರಾಜ್ಯದಿಂದ ಮರಳಿದ ಜನ್ರಲ್ಲಿ ಪತ್ತೆಯಾಗುತ್ತಿತ್ತು. ಅದ್ರೆ ಈಗ ಈ ಸೋಂಕು ಸಮುದಾಯದ ತಳ‌ಮಟ್ಟದಿಂದ ಹರಡುತ್ತಿದೆ. ಇದಕ್ಕೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕೂಡಾ ಹೊರತಾಗಿಲ್ಲ. ಹಿರಿಯೂರಿನಲ್ಲಿ ಈಗಾಗಲೇ 10ಕ್ಕೂ ಹೆಚ್ಚ ಪ್ರಕರಣಗಳು ಸ್ಥಳೀಯರಲ್ಲಿ ಪತ್ತೆಯಾಗಿದ್ದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ.

ಕೊರೊನಾ ಹಾಟ್‌ ಸ್ಪಾಟ್ ಆಗ್ತಿದೆಯೇ ಹಿರಿಯೂರು?

ಹಿರಿಯೂರು ಪಟ್ಟಣದ ವೇದಾವತಿ ನಗರ ಹಾಗು ಅಜಾದ್ ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಕೊರೊನಾ ತಾಂಡವಾಡುತ್ತಿದೆ. ಇಲ್ಲಿನ ಎರಡು ನಗರಗಳನ್ನು ಮುಂಜಾಗ್ರತಾ ಕ್ರಮವಾಗಿ ಸೀಲ್ ಡೌನ್ ಮಾಡಲಾಗಿದೆ. ಇಲ್ಲಿಯವರೆಗೆ ಕೊರೊನಾ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಬಂದವರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿತ್ತು. ಹೀಗಾಗಿ ಜಿಲ್ಲೆಯ ಜನ ನಿರಾಳರಾಗಿದ್ದರು. ಆದರೀಗ‌ ಚಿತ್ರದುರ್ಗದಲ್ಲಿ ಸಮುದಾಯದತ್ತ ಹರಡುತ್ತಿದೆಯೇ‌ ಎಂಬ ಮಾತುಗಳು ಕೇಳಿ ಬರುತ್ತಿದೆ. ಹಿರಿಯೂರಿನ ವೇದಾವತಿ ನಗರದ ನಿವಾಸಿಯಾಗಿರುವ ವೈದ್ಯ, ಸಗಟು ವ್ಯಾಪಾರಸ್ಥ, ಕಿರಾಣಿ ಅಂಗಡಿ ಮಾಲೀಕ ಸೇರಿದಂತೆ ಅಂಗಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯುವಕರು ಹಾಗು ಅಜಾದ್ ನಗರದ ತಾಯಿ, ಮಗ ಸೇರಿ ಹತ್ತಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

27 ವರ್ಷದ ವೈದ್ಯ ಜೂನ್ 20 ರಂದು ಹೊಸದುರ್ಗ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು ,ಜೂನ್ 22 ರಂದು ವೈದ್ಯರಿಗೆ ಕೊರೊನಾ ಸೋಂಕು ಇರೋದು ದೃಢಪಟ್ಟಿತ್ತು. ಇದರ ಬೆನ್ನಲ್ಲೇ ವೈದ್ಯರ ಪಕ್ಕದ‌ ಮನೆಯಲ್ಲಿಯೇ ವಾಸವಾಗಿರವ ಕಿರಾಣಿ ಅಂಗಡಿ ವ್ಯಾಪಾರಿಗೂ ಸೊಂಕು ತಗುಲಿದೆ. ಆತ ವ್ಯಾಪಾರಕ್ಕಾಗಿ ಬೆಂಗಳೂರಿಗೆ ಹೋಗಿ ಬಂದಿರುವ ಟ್ಪಾವೆಲ್ ಹಿಸ್ಟರಿ ಇದೆ. ಹೀಗಾಗಿ ಅವರನ್ನು ಚಿತ್ರದುರ್ಗ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ‌ಮಾಡಲಾಗಿದೆ. ಜೊತೆಗೆ, ಪ್ರಾಥಮಿಕ ಸಂಪರ್ಕದಲ್ಲಿ ಇದ್ದ 7 ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಆದ್ದರಿಂದ ಜಿಲ್ಲೆಯ ಜನರು ಆತಂಕ ಪಡುವ ಅಗತ್ಯವಿಲ್ಲ ಅಂತಾರೆ‌ ಡಿಹೆಚ್‌ಓ ಪಾಲಾಕ್ಷ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.