ETV Bharat / state

ಮೂರು ವರ್ಷದ ಮಗು ಸೇರಿ ಮೂವರ ದುರ್ಮರಣ.. ಚಿತ್ರದುರ್ಗದ ಬಳಿ ಭೀಕರ ರಸ್ತೆ ಅಪಘಾತ - ಚನ್ನಪಟ್ಟಣ ತಾಲೂಕಿನ ಕೋಲೂರು ಗೇಟ್ ಬಳಿ

ಗೋವಾದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಿದ್ದ ವೇಳೆ ಚಿತ್ರದುರ್ಗದ ಬಳಿ ಕಾರು ಲಾರಿಗೆ ಡಿಕ್ಕಿ ಹೊಡೆದಿದ್ದು, ಮೂವರು ಸಾವನ್ನಪ್ಪಿದ್ದಾರೆ.

Chitradurga car Accident
Chitradurga car Accident
author img

By

Published : Jun 12, 2023, 2:14 PM IST

Updated : Jun 12, 2023, 3:20 PM IST

ಚಿತ್ರದುರ್ಗದ ಬಳಿ ಭೀಕರ ರಸ್ತೆ ಅಪಘಾತ

ಚಿತ್ರದುರ್ಗ: ಜಿಲ್ಲೆಯ ವಿಜಯಪುರದ ಗೊಲ್ಲರಹಟ್ಟಿ ಎಂಬ ಪ್ರದೇಶದ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟಿದ್ದಾರೆ. ಗೋವಾದಿಂದ ಬೆಂಗಳೂರಿಗೆ ಹಿಂದಿರುಗುವ ವೇಳೆ ಸರಕು ಸಾಗಣೆ ಲಾರಿಗೆ ಟೊಯೋಟ ಫಾರ್ಚುನರ್​ ಕಾರು ಡಿಕ್ಕಿಯಾಗಿದೆ.

ಡಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದೆ. ಕಾರಿನಲ್ಲಿ ಒಂದೇ ಕುಟುಂಬದ ಸದಸ್ಯರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಸ್ಥಳದಲ್ಲೇ ಇಬ್ಬರು ಮೃತ ಪಟ್ಟರೆ, ಆಸ್ಪತ್ರಗೆ ಸಾಗಿಸಿದ ಬಳಿಕ ಮೂರು ವರ್ಷದ ಮಗು ಕೊನೆಯುಸಿರೆಳೆದಿದೆ. ಮೃತರನ್ನು ತಾಯಿ ತಬ್ಸೂಮ್(28), ಪುತ್ರಿ ಫಾತಿಮಾ(03), ಸಂಬಂಧಿ ಜಾಕೀರ್ ಅಹ್ಮದ್ (60) ಎಂದು ಗುರುತಿಸಲಾಗಿದೆ.

ಇನ್ನುಳಿದ ಐವರಿಗೆ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಬೆಂಗಳೂರಿನ ಹೆಚ್​ಎಸ್​​ಆರ್ ಲೇಔಟ್ ನಿವಾಸಿಗಳು ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ: ರಾಮನಗರ: ಮನಕಲಕುವಂತಿದೆ ಅಪಘಾತಕ್ಕೂ ಮುಂಚಿನ ಗೆಳೆಯರ ಕುಚುಕು ವಿಡಿಯೋ..

ಕಾರು ಪಲ್ಟಿ ಹೊಡೆದು ಕುಚುಕು ಗೆಳೆಯರ ಸಾವು: ಚನ್ನಪಟ್ಟಣ ತಾಲೂಕಿನ ಕೋಲೂರು ಗೇಟ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾರು ಪಲ್ಟಿ ಹೊಡೆದ ಪರಿಣಾಮ ರಸ್ತೆ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಬೆಂಗಳೂರಿಂದ ಅತಿ ವೇಗವಾಗಿ ಬಂದ ಟಾಟಾ ಇಂಡಿಕಾ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಗುದ್ದಿ ಪಲ್ಟಿಯಾಗಿದೆ.

ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತವಾಗಿದೆ. ಮೃತರ ಹೆಸರುಗಳು ಇನ್ನು ತಿಳಿದು ಬಂದಿಲ್ಲ. ಕಾರು ಅತಿಯಾದ ವೇಗವಾಗಿ ಬಂದ ಹಿನ್ನೆಲೆ ಪಲ್ಟಿಯಾಗಿ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದರು ರಸ್ತೆಯಲ್ಲಿ ಬಿದ್ದಿದ್ದಾರೆ. ಈ ವೇಳೆ ಓರ್ವ ಸ್ಥಳದಲ್ಲೇ ಮೃತಪಟ್ಟರೆ ಉಳಿದ ಮೂವರಿಗೆ ಗಂಭೀರ ಗಾಯಗಳಾಗಿವೆ. ರಾಮನಗರದ ವಿನಯ್, ವಿಜಯ್, ಮಂಜೇಶ್ ಮತ್ತು ನಿಖಿಲ್ ಕೆಲಸ‌ ನಿಮಿತ್ತ ಮದ್ದೂರು ತಾಲೂಕಿನ ಬೆಸಗರಹಳ್ಳಿಗೆ ಹೋಗಿ ರಾಮನಗರಕ್ಕೆ ಹಿಂದಿರುಗುತ್ತಿದ್ದರು ಎಂದು ತಿಳಿದು ಬಂದಿದೆ.

ಸಾಯುವ ಕೆಲ‌ ನಿಮಿಷಗಳ ಮೊದಲು ನಾಲ್ಕು ಮಂದಿ ಸ್ನೇಹಿತರು ಕುಚುಕು, ಕುಚುಕು ಹಾಡು ಹಾಕಿಕೊಂಡು ಜಾಲಿ ಮೂಡ್​ನಲ್ಲಿ ಬರುತ್ತಿದ್ದ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕುಚುಕು ಗೆಳಯರು ಕಾರಿನಲ್ಲಿ ಹಾಡಿಕೊಂಡು ಪ್ರಯಾಣ ಮಾಡುತ್ತಿರುವ ಸಂತೋಷದ ವಿಡಿಯೋ ಈಗ ನೋಡಿದರೆ ಕಣ್ಣಾಲಿಗಳಲ್ಲಿ ನೀರು ತರಿಸುತ್ತದೆ. ಓದು ಮುಂದುವರೆಸಲು..Mysore Bangalore Highway accident: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ.. ಓರ್ವ ಸಾವು ; 3 ಮಂದಿಗೆ ತೀವ್ರ ಗಾಯ

ಮದುವೆಯಿಂದ ಮರಳುವಾಗ ಅಪಘಾತ: ಆಂಧ್ರಪ್ರದೇಶ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ನಲ್ಲಜರ್ಲಾ ತಾಲೂಕಿನ ಅನಂತಪಲ್ಲಿ ಉಪನಗರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿರುವ ವರದಿಯಾಗಿದೆ.

ರಾಜಮಹೇಂದ್ರವರಂನ ಪ್ರಕಾಶನಗರದ 8 ಜನರು ಹೈದರಾಬಾದ್‌ನಲ್ಲಿ ಮದುವೆಯಲ್ಲಿ ಭಾಗವಹಿಸಿ ತಮ್ಮ ಊರಿಗೆ ಮರಳುತ್ತಿದ್ದ ವೇಳೇ ನಿಂತಿರುವ ಲಾರಿಗೆ ಕಾರು ಗುದ್ದಿದ ಪರಿಣಾಮ ಅಪಘಾತ ಸಂಭವಿಸಿದೆ. ಹೆಚ್ಚಿನ ಮಾಹಿತಿಗೆ ಲಿಂಕ್​ ಬಳಸಿ... ಮದುವೆಗೆ ತೆರಳಿ ವಾಪಸ್​ ಆಗುತ್ತಿದ್ದ ವೇಳೆ ಭೀಕರ ಅಪಘಾತ.. ಮಗು ಸೇರಿ ಏಳು ಜನ ಸಾವು!

Last Updated : Jun 12, 2023, 3:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.