ETV Bharat / state

ಲಾಕ್​ಡೌನ್​ ಅವಧಿ 'ದುರ್ಬಳಕೆ': ಪೋಷಕರಿಗೆ ಬಿಸಿ ಮುಟ್ಟಿಸಿದ ಪೊಲೀಸರು - ಲಾಕ್​ಡೌನ್​

ಚಿತ್ರದುರ್ಗದಲ್ಲಿ ಲಾಕ್​ಡೌನ್​ ವೇಳೆ ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯ ವಿವಾಹ ಮಾಡುತ್ತಿರುವ ಆರೋಪಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ 50ಕ್ಕೂ ಹೆಚ್ಚು ಬಾಲ್ಯವಿವಾಹಗಳನ್ನು ಪೊಲೀಸರು ನಿಲ್ಲಿಸಿದ್ದಾರೆ.

child marriages
ಬಾಲ್ಯವಿವಾಹಕ್ಕೆ ತಡೆ
author img

By

Published : Jul 9, 2020, 12:45 PM IST

ಚಿತ್ರದುರ್ಗ: ರಾಜ್ಯ ಸರ್ಕಾರ ರಾಜ್ಯದಲ್ಲಿ ಕೊರೊನಾ ನಿಯಂತ್ರಿಸಲು ಲಾಕ್​ಡೌನ್ ಅಸ್ತ್ರ ಬಳಕೆ‌ ಮಾಡಿತ್ತು. ಅದ್ರೆ ಜಿಲ್ಲೆಯಲ್ಲಿ ಲಾಕ್​ಡೌನ್​ ಅನ್ನು ಬಂಡವಾಳ ಮಾಡಿಕೊಂಡ ಹಲವು ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯ ವಿವಾಹ ಮಾಡಲು ಮುಂದಾಗಿದ್ದರು. ಆ ಪೋಷಕರಿಗೆ ಅಧಿಕಾರಿಗಳು ಬಿಸಿ ಮುಟ್ಟಿಸುವ ಮೂಲಕ ಸುಮಾರು 50ಕ್ಕೂ ಹೆಚ್ಚು ಬಾಲ್ಯ ವಿವಾಹಗಳನ್ನು ತಡೆ ಹಿಡಿದಿದ್ದಾರೆ.

ಬಾಲ್ಯವಿವಾಹಕ್ಕೆ ತಡೆ

ಲಾಕ್​ಡೌನ್​ ವೇಳೆ ರಾತ್ರಿ 12ರಿಂದ ಬೆಳಗ್ಗೆ ನಾಲ್ಕು ಗಂಟೆಯ ಒಳಗೆ ಬಾಲ್ಯವಿವಾಹಗಳು ನಡೆಯುತ್ತಿವೆ ಎನ್ನಲಾಗುತ್ತಿದೆ. ಕಳೆದ ಮಾರ್ಚ್​ನಿಂದ ಇಲ್ಲಿಯವರೆಗೆ ಯಾರಿಗೂ ತಿಳಿಯದ ಹಾಗೆ ಬಾಲ್ಯ ವಿವಾಹವನ್ನು ಮಾಡಿ ಮುಗಿಸಲಾಗಿದೆ. ಮಕ್ಕಳ ಸಹಾಯವಾಣಿ 1098ಕ್ಕೆ ಬಂದ ಕರೆಗಳನ್ನು ಆಧರಿಸಿ ಪೋಲಿಸ್ ಇಲಾಖೆ ಸೇರಿದಂತೆ ಶಿಶು ಅಭಿವೃದ್ಧಿ ಯೋಜನೆಯ ಅಧಿಕಾರಿಗಳು, ಹಾಗೂ ಬಸವೇಶ್ವರ ಸಂಸ್ಥೆಯ ಮಕ್ಕಳ ಕುಟಿರದ ಕಾರ್ಯದರ್ಶಿ ಶಂಕರಪ್ಪನವರು ಜಂಟಿಯಾಗಿ ದಾಳಿ ನಡೆಸಿ ಹಲವಾರು ಬಾಲ್ಯ ವಿವಾಹಗಳನ್ನು ತಡೆಹಿಡಿದಿದ್ದಾರೆ.

ಇಲ್ಲಿಯ ತನಕ ಒಟ್ಟು ಪೋಕ್ಸೋ ಆ್ಯಕ್ಟ್ ಅಡಿಯಲ್ಲಿ 30 ಪ್ರಕರಣಗಳು ದಾಖಲಾಗಿವೆ. ಕೆಲ ಪೋಷಕರಿಗೆ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕಾರಣ ಕೇಳಿ ನೋಟಿಸ್ ನೀಡಿದ್ದು, ತನಿಖೆ ಮುಂದುವರೆದಿದೆ.

ಮೊಳಕಾಲ್ಮೂರು ತಾಲೂಕಿನ ಕೋನಾಪುರ ಎಂಬ ಒಂದೇ ಗ್ರಾಮದಲ್ಲಿ ಹತ್ತು ಬಾಲ್ಯ ವಿವಾಹಗಳು ನಡೆದಿದ್ದು, ಸತ್ಯಶೋಧನ ಸಮಿತಿಯವರು ಭೇಟಿ ನೀಡಿ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ವಿವಾಹಗಳು ನಡೆದಿರುವುದು ಖಾತ್ರಿಯಾಗಿದೆ. ಬಾಲ್ಯವಿವಾಹವಾದ ಮಕ್ಕಳ ಪೋಷಕರ ವಿರುದ್ಧ ತನಿಖೆ ಆರಂಭವಾಗಿದೆ‌.

ಚಿತ್ರದುರ್ಗ ತಾಲೂಕು 13, ಚಳ್ಳಕೆರೆ 14, ಹಿರಿಯೂರು 3, ಹೊಳಲ್ಕೆರೆ 3, ಹೊಸದುರ್ಗ 4, ಮೊಳಕಾಲ್ಮೂರು 13 ಸೇರಿ ಒಟ್ಟು ಐವತ್ತು ಬಾಲ್ಯ ವಿವಾಹಗಳನ್ನು ತಡೆಹಿಡಿಯಲಾಗಿದೆ. ಇನ್ನು ಚಿತ್ರದುರ್ಗ ತಾಲೂಕಿನಲ್ಲೊಂದು ಬಾಲ್ಯ ವಿವಾಹ ನಡೆದು ಹೋಗಿದ್ದರಿಂದ ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಜಿಲ್ಲೆಯಲ್ಲಿನ ಆರು ತಾಲೂಕುಗಳ ಪೈಕಿ ಮೊಳಕಾಲ್ಮೂರಿನಲ್ಲಿ ಮಾತ್ರ ಬಾಲ್ಯ ವಿವಾಹಗಳು ಹೆಚ್ಚಾಗುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪಗಳೂ ಕೂಡಾ ಕೇಳಿಬರುತ್ತಿವೆ. ಈ ಆರೋಪವನ್ನು ಅಲ್ಲಿನ ಅಧಿಕಾರಿಗಳು ಹೇಗೆ ಬಗೆಹರಿಸುತ್ತಾರೆ ಎಂದು ಕಾದುನೋಡಬೇಕಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.