ETV Bharat / state

ಗ್ರಾಮಕ್ಕೆ ನುಗ್ಗಿ ಕರಡಿಯ ದಾಂಧಲೆ : ಓರ್ವ ಸಾವು, ನಾಲ್ವರಿಗೆ ಗಂಭೀರ ಗಾಯ - ಅರಣ್ಯ ಇಲಾಖೆ ಸಿಬ್ಬಂದಿ

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಶ್ರೀರಾಂಪುರ ಸಮೀಪದ ದಳವಾಯಿಕಟ್ಟೆಗೆ ನುಗ್ಗಿದ ಕರಡಿಯೊಂದು 7 ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದು, ಓರ್ವ ಸಾವನ್ನಪ್ಪಿದ್ದಾರೆ.

ಗ್ರಾಮಕ್ಕೆ ನುಗ್ಗಿದ ಕರಡಿ
author img

By

Published : Sep 13, 2019, 4:50 PM IST

ಚಿತ್ರದುರ್ಗ: ಗ್ರಾಮಕ್ಕೆ ಕರಡಿ ನುಗ್ಗಿ ದಾಂಧಲೆ‌ ನಡೆಸಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಶ್ರೀರಾಂಪುರ ಸಮೀಪದ ದಳವಾಯಿಕಟ್ಟೆ ಗ್ರಾಮದಲ್ಲಿ ನಡೆದಿದೆ.

ದಳವಾಯಿಕಟ್ಟೆ ಬಳಿ ದಾಳಿ ನಡೆಸಿದ ಕರಡಿ ಒಂದು ಹಸು ಹಾಗೂ 7 ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಇವರಲ್ಲಿ ರಮೇಶ್, ಉಮೇಶ್, ಶಶಿ ಸೇರಿದಂತೆ ನಾಲ್ವರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇವರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬುಕ್ಕಸಾಗರದ ರಾಜಣ್ಣ (50) ಸಾವನ್ನಪ್ಪಿದ್ದಾರೆ.

ಗಾಬರಿಗೊಂಡು ಗ್ರಾಮಕ್ಕೆ ಕರಡಿ ನುಗ್ಗಿದ್ದರಿಂದ ಜನರಲ್ಲಿ ಆತಂಕ ಹೆಚ್ಚಿದ್ದು, ಕರಡಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

Intro:ಗ್ರಾಮಕ್ಕೆ ನುಗ್ಗಿದ ಕರಡಿ ಏಳು ಜನ್ರಿಗೆ ಗಂಭೀರ ಗಾಯ

ಆ್ಯಂಕರ್:- ಗ್ರಾಮಕ್ಕೆ ಕರಡಿ ನುಗ್ಗಿ ದಾಂಧಲೆ‌ ನಡೆಸಿರುವ ಘಟನೆ
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಸಮೀಪದ ದಳವಾಯಿಕಟ್ಟೆ ಗ್ರಾಮದಲ್ಲಿ ನಡೆದಿದೆ. ದಳವಾಯಿಕಟ್ಟೆ ಬಳಿ ದಾಳಿ ನಡೆಸಿದ ಕರಡಿ ಒಂದು ಹಸು ಸೇರಿದ್ದಂತೆ 7 ಜನರಿಗೆ ಗಂಭೀರ ಗಾಯಗೊಳಿಸಿದೆ. ಗಾಯಳುಗಳನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಪ್ರಾಣಾಯಪಾಯದಿಂದ ಪಾರಾಗಿದ್ದಾರೆ.
ಇನ್ನೂ ಗಾಬರಿಗೊಂಡು ಗ್ರಾಮಕ್ಕೆ ಕರಡಿ ನುಗ್ಗಿದ್ದರಿಂದ ಜನರಲ್ಲಿ ಆತಂಕ ಹೆಚ್ಚಿದ್ದು, ಕರಡಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಈ ಕರಡಿ ದಾಳಿಯಿಂದ ಉಮೇಶ್ ಮತ್ತು ಶಶಿ ಎಂಬುವರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಫ್ಲೋ....

Body:KaradiConclusion:Pundata
ETV Bharat Logo

Copyright © 2024 Ushodaya Enterprises Pvt. Ltd., All Rights Reserved.