ಚಿತ್ರದುರ್ಗ: ದುಡಿಯಲು ತನ್ನ ಹುಟ್ಟೂರು ತೊರೆದು ಹೈದರಾಬಾದ್ಗೆ ಆಗಮಿಸಿದ್ದ ಆತ ಐದಾರು ವರ್ಷಗಳ ಕಾಲ ತನ್ನ ಕುಟುಂಬಕ್ಕಾಗಿ ದುಡಿದ. ಆದರೆ ಹೈದರಾಬಾದ್ನಿಂದ ಇದ್ದಕ್ಕಿದಂತೆ ಕಣ್ಮರೆಯಾದ ಆತ ಇದೀಗ ಚಿತ್ರದುರ್ಗದ ಗೋನೂರು ನಿರಾಶ್ರಿತರ ಕೇಂದ್ರದಲ್ಲಿದ್ದಾನೆ. ಬುದ್ಧಿ ಭ್ರಮಣೆಯಿಂದ ಗುಣಮುಖನಾಗಿ ತನ್ನ ಹುಟ್ಟೂರಿಗೆ ಹೋಗಲು ಹಾತೊರೆಯುತ್ತಿದ್ದಾನೆ. ಆದರೆ, ದುರಾದೃಷ್ಟ ಎಂದರೆ ಯುವಕನ ವಿಳಾಸ ಸಿಗದೇ ಇರುವುದು ನಿರಾಶ್ರಿತ ಕೇಂದ್ರದ ಸಿಬ್ಬಂದಿಯನ್ನ ಹೈರಾಣಾಗಿಸಿದೆ.
ಕೋಟೆನಾಡು ಚಿತ್ರದುರ್ಗದ ತಾಲೂಕಿನ ಗೋನೂರು ನಿರಾಶ್ರಿತರ ಕೇಂದ್ರ ಇದೀಗ ರಾಜ್ಯದಲ್ಲೇ ಅತ್ಯುತ್ತಮ ನಿರಾಶ್ರಿತರ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿರುವ ಉತ್ತರಪ್ರದೇಶ ಮೂಲದ ಯುವಕ ತನ್ನ ಕುಟುಂಬ ಸೇರಲು ಹಾತೊರೆಯುತ್ತಿದ್ದಾನೆ. ಈಗಾಗಲೇ ಬುದ್ಧಿಭ್ರಮಣೆಯಿಂದ ಸಂಪೂರ್ಣ ಗುಣಮುಖನಾಗಿರುವ ದೀಪು ಎಂಬಾತ ಮನೆಗೆ ತೆರಳಿ ಕುಟುಂಬ ಸೇರಲು ತುದಿಗಾಲಿನಲ್ಲಿ ನಿಂತಿದ್ದಾನೆ.
ಇಪ್ಪತ್ತು ವರ್ಷಗಳ ಹಿಂದೆ ದುಡಿಯಲು ಉತ್ತರಪ್ರದೇಶವನ್ನು ತೊರೆದು ಮುತ್ತಿನ ನಗರಿ ಹೈದರಾಬಾದ್ನ ನಾಂಪಲ್ಲಿಗೆ ಆಗಮಿಸಿದ್ದ. ಈ ವೇಳೆ, ರೈಲ್ವೆ ಸ್ಟೇಷನ್ ಬಳಿ ಇರುವ ಅವರ ಮಾವನ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದ. ಅಲ್ಲಿಂದ ಕಲ್ಲಿನ ಕೆಲಸ (ಟೈಲ್ಸ್ ಮತ್ತು ಗ್ರಾನೈಟ್ ಕೆಲಸ) ಮಾಡಿಕೊಂಡು ಐದು ವರ್ಷಗಳ ಕಾಲ ದಿನ ಕಳೆದಿದ್ದಾನೆ. ಬಳಿಕ ಒಂದು ದಿನ ದೀಪು ಚಾರ್ಮಿನಾರ್ ನೋಡಿಕೊಂಡು ಬರುವುದಾಗಿ ಆಗಮಿಸಿ ಹಾದಿ ತಪ್ಪಿ ಬುದ್ಧಿಭ್ರಮಣೆಯಾಗಿ ರಸ್ತೆಯುದ್ದಕ್ಕೂ ಅಲಿಯುತ್ತಿದ್ದನಂತೆ. ಬಳಿಕ ಕೆಲ ಡಾಬಾದಲ್ಲಿ ಕೆಲಸ ಮಾಡಿಕೊಂಡು, ಲಾರಿ ಕ್ಲೀನರ್ ಆಗಿ ಕೆಲಸ ಕೂಡ ಕೆಲಸ ಮಾಡಿದ್ದಾನೆ. ನಂತರ ಆ ಕೆಲಸ ಬಿಟ್ಟು ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲೆತ್ತಿದ್ದನಂತೆ. ಈ ವೇಳೆ ಗೋನೂರು ನಿರಾಶ್ರಿತರ ಕೇಂದ್ರದ ಸಿಬ್ಬಂದಿಗೆ ಸಿಕ್ಕಿದ್ದಾನೆ. ದೀಪುನನ್ನು ಸಿಬ್ಬಂದಿ ವಿಚಾರಿಸಿದಾಗ ಬುದ್ಧಿಭ್ರಮಣೆಯಾಗಿರುವುದು ತಿಳಿದಿದ್ದು, ನಿರಾಶ್ರಿತರ ಕೇಂದ್ರಕ್ಕೆ ಕರೆತಂದ ಸಿಬ್ಬಂದಿ ಐದು ವರ್ಷಗಳ ಕಾಲ ಪೋಷಣೆ ಮಾಡಿ ಬಳಿಕ ಸಂಪೂರ್ಣ ಗುಣಮುಖನಾಗುವಂತೆ ನೋಡಿಕೊಂಡಿದ್ದಾರೆ. ಇದ್ದರಿಂದ ಇದೀಗ ನನ್ನನ್ನು ಮನೆಗೆ ಕಳುಹಿಸಿಕೊಡಿ ಹೋಗುತ್ತೇನೆ ಎಂದು ಅಂಗಲಾಚುತ್ತಿದ್ದಾರೆ. ಆದರೆ, ಸರಿಯಾದ ವಿಳಾಸ ಸಿಗದೆ ಇರುವುದು ಸಮಸ್ಯೆಯಾಗಿಯೇ ಉಳಿದುಕೊಂಡಿದೆ.
ಈಗಾಗಲೇ ಸಂಪೂರ್ಣವಾಗಿ ಗುಣಮುಖನಾಗಿರುವ ದೀಪು ಉತ್ತರಪ್ರದೇಶದ ಬಾಬು ಹರ್ದಿ ಎಂಬ ಊರಿನ ಹೆಸರು ಹೇಳುತ್ತಿದ್ದು, ಇಡೀ ತಮ್ಮ ಕುಟುಂಬ ಸದಸ್ಯರ ಹೆಸರುಗಳನ್ನು ಪಟಪಟನೇ ಹೇಳುತ್ತಿದ್ದಾನೆ. ದೀಪುವಿನಿಂದ ಮಾಹಿತಿ ಪಡೆದ ನಿರಾಶ್ರಿತರ ಕೇಂದ್ರದ ಸೂಪರಿಟೆಂಡೆಂಟ್ ಮಹಾದೇವಯ್ಯ ಉತ್ತರ ಪ್ರದೇಶ ರಾಜ್ಯದ ಬಾಬುಹರ್ದಿ ಎಂಬ ವಿಳಾಸವನ್ನು ಪತ್ತೆ ಮಾಡಿದ್ದಾರೆ. ಆದರೆ ದೀಪುವಿನ ಕುಟುಂಬ ಮಾತ್ರ ಸಿಕ್ಕಿಲ್ಲವಂತೆ. ಆದರೆ ಇನ್ನೂ ಪಯತ್ನ ಬಿಡದ ಸಿಬ್ಬಂದಿ ಆತನ ವಿಳಾಸಕ್ಕಾಗಿ ಹುಡುಕಾಡುತ್ತಿದ್ದಾರೆ.