ETV Bharat / state

ಚಿತ್ರದುರ್ಗದಲ್ಲಿ ಯುವಕನ ಮೇಲೆ ಆ್ಯಸಿಡ್​ ದಾಳಿ

ಚಿತ್ರದುರ್ಗ ಜಿಲ್ಲೆಯಲ್ಲಿ ಆ್ಯಸಿಡ್​ ದಾಳಿ ನಡೆದಿದೆ. ಯುವಕನ ಮುಖ ಮತ್ತು ಕೈಗೆ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Acid attack  Acid attack on youth  ಆ್ಯಸಿಡ್​ ದಾಳಿ  ಸಂತ್ರಸ್ತ ಆರೋಪ
ಕುಟುಂಬಸ್ಥರ ಮೇಲೆ ಸಂತ್ರಸ್ತ ಆರೋಪ
author img

By ETV Bharat Karnataka Team

Published : Jan 17, 2024, 7:37 AM IST

ಚಿತ್ರದುರ್ಗ: ಊಟಕ್ಕೆಂದು ಡಾಬಾ ಮುಂದೆ ಬಸ್ ನಿಲ್ಲಿಸಲಾದ ಸಮಯದಲ್ಲಿ ದುಷ್ಕರ್ಮಿಗಳಿಬ್ಬರು ಯುವಕನ ಮೇಲೆ ಆ್ಯಸಿಡ್​ ದಾಳಿ ಮಾಡಿ ಪರಾರಿಯಾಗಿರುವ ಘಟನೆ ಹಿರಿಯೂರು ಪಟ್ಟಣದ ಬಳಿ ನಡೆದಿದೆ. ಈ ಘಟನೆ ಪ್ರೀತಿ, ಪ್ರೇಮದ ವಿಷಯಕ್ಕೆ ಸಂಬಂಧಿಸಿದೆ ಎಂದು ಯುವಕ ಆರೋಪಿಸಿದ್ದಾರೆ.

ಘಟನೆಯ ವಿವರ: ಆ್ಯಸಿಡ್​ ದಾಳಿಗೊಳಗಾದ ಸಂತ್ರಸ್ತನನ್ನು ಹೊಳಲ್ಕೆರೆ ನಿವಾಸಿ ಅರುಣ್ ಕುಮಾರ್ (29) ಎಂದು ಗುರುತಿಸಲಾಗಿದೆ. ಇವರು​ ಬೆಂಗಳೂರಿನಲ್ಲಿ ಗೋಗ್ಯಾಸ್ ಎಲ್​ಪಿಜಿ ಬಂಕ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಂಗಳವಾರ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್​ನಲ್ಲಿ ಚಿತ್ರದುರ್ಗದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಚಾಲಕ ಚಹಾ ಸೇವಿಸಲು ಹಿರಿಯೂರು ಸಮೀಪದ ಖಾಸಗಿ ಡಾಬಾದಲ್ಲಿ ಬಸ್​ ನಿಲ್ಲಿಸಿದ್ದಾರೆ. ಬಸ್​ನಿಂದ ಕೆಳಗಿಳಿದ ಅರುಣ್​​ ಕುಮಾರ್​ ನೇರವಾಗಿ ವಾಷ್​ರೂಂಗೆ ತೆರಳಿ ಮತ್ತೆ ಬಸ್​ ಹತ್ತಲು ಬರುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ದುಷ್ಕರ್ಮಿಯೊಬ್ಬ ಆ್ಯಸಿಡ್​ ತಂದು ಮೈಮೇಲೆ ಎರಚಿ ಪರಾರಿಯಾಗಿದ್ದಾನೆ. ಅರುಣ್​ ಕಿರುಚಿಕೊಂಡಿದ್ದು, ಸ್ಥಳದಲ್ಲಿದ್ದ ಕೆಲವರು ಸಹಾಯಕ್ಕೆ ದೌಡಾಯಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಅರುಣ್​ ಕುಮಾರ್​ ಕೈ ಮತ್ತು ಮುಖಕ್ಕೆ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

"ನಾನು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ. ನಿನ್ನೆ ಚಿತ್ರದುರ್ಗದಿಂದ ಬೆಂಗಳೂರಿಗೆ ತೆರಳುತ್ತಿದ್ದೆ. ಚಾಲಕ​ ಡಾಬಾವೊಂದರ ಬಳಿ ಬಸ್​ ನಿಲ್ಲಿಸಿದ್ದರು. ವಾಷ್​ರೂಂಗೆ ತೆರಳಿ ವಾಪಸಾಗುತ್ತಿದ್ದಾಗ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಜಗ್​ ತುಂಬಾ ನನ್ನ ಮೇಲೆ ಆ್ಯಸಿಡ್​ ಎರಚಿ ಪರಾರಿಯಾಗಿದ್ದಾನೆ. ನಾನು ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದೆ. ಅವರೂ ಸಹ ನಮ್ಮ ಕುಟುಂಬಸ್ಥರೇ. ಆದರೆ ಆಕೆಯ ಕಡೆಯವರಿಂದ ಪ್ರೇಮಕ್ಕೆ ವಿರೋಧವಿದೆ. ಯುವತಿ ಕಡೆಯವರಿಂದಲೇ ಈ ಕೃತ್ಯ ನಡೆದಿರುವ ಶಂಕೆ ಇದೆ" ಎಂದು ಅರುಣ್​ ಕುಮಾರ್​ ಆರೋಪಿಸಿದರು.

"ನಾನು ಮನೆಯಲ್ಲಿ ಇಲ್ಲದ ವೇಳೆ ನನ್ನ ಬಗ್ಗೆ ತಾಯಿಯ ಬಳಿ ವಿಚಾರಿಸಿದ್ದಾರೆ. ಕಳೆದ ಎರಡು ದಿನಗಳಿಂದ ನನ್ನನ್ನು ಫಾಲೋ ಮಾಡಿದ್ದಾರೆ. ಈ ದಾಳಿಗೂ ಮುನ್ನ ಅಪರಿಚಿತ ವ್ಯಕ್ತಿ ನನಗೆ ಕರೆ ಮಾಡಿ ನಿನಗೆ ಅಪಾಯವಿದೆ ಎಂದು ಎಚ್ಚರಿಸಿದ್ದರು. ನಾನು ಪ್ರಾಂಕ್​ ಕಾಲ್​ ಎಂದು ಸುಮ್ಮನಾಗಿದ್ದೆ" ಎಂದು ಅರುಣ್​ ಕುಮಾರ್​ ತಿಳಿಸಿದ್ದಾರೆ. ಹಿರಿಯೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಮನೆ ಬಳಿ ಹುಲ್ಲು ಮೇಯುತ್ತಿದ್ದ 15 ಹಸುಗಳ ಮೇಲೆ ಆ್ಯಸಿಡ್ ಎರಚಿದ ವೃದ್ಧ ಮಹಿಳೆ - ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.