ಚಿತ್ರದುರ್ಗ: ಲಾರಿ-ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಬೈಕ್ ಸವಾರ ಮೃತ ಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.
ಚಳ್ಳಕೆರೆ ತಾಲೂಕಿನ ಚಳ್ಳಕೇರಮ್ಮ ದೇವಸ್ಥಾನದ ಹಿಂಭಾಗದ ಅಜ್ಜನಗುಡಿ ರಸ್ತೆಯ ಎಸಿ ಗೋಡನ್ ಬಳಿ ಈ ಅವಘಡ ಸಂಭವಿಸಿದೆ.
ಭಾನುಸಿಂಗ್ (30) ಮೃತ ಬೈಕ್ ಸವಾರ. ಇನ್ನೂ ಗಾಯಳುಗಳಾದ ರಾಜಸ್ಥಾನ ಮೂಲದ ಭೂಮಸಿಂಗ್, ವೀರಸಿಂಗ್ ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಚಳ್ಳಕೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.