ಚಿತ್ರದುರ್ಗ: ಐಪಿಎಲ್ನಲ್ಲಿ ನತದೃಷ್ಟ ತಂಡ ಎಂದೇ ಖ್ಯಾತವಾಗಿರುವ ಆರ್ಸಿಬಿ ಅಭಿಮಾನಿಗಳನ್ನು ಹೊಂದಿರುವ ವಿಚಾರದಲ್ಲಿ ಅದೃಷ್ಟವಂತ ತಂಡವಾಗಿದೆ. 3 ಬಾರಿ ಫೈನಲ್ ಪ್ರವೇಶಿಸಿ ಒಮ್ಮೆಯೂ ಚಾಂಪಿಯನ್ ಆಗಿಲ್ಲ. ಆದರೆ ಆಭಿಮಾನಿಗಳು ಮಾತ್ರ ಪ್ರತಿ ಐಪಿಎಲ್ ಆರಂಭವಾದಾಗಲೂ 'ಈ ಸಲ ಕಪ್ ನಮ್ದೆ' ಎಂದು ಕನಸು ಕಾಣುತ್ತಿರುತ್ತಾರೆ. ಅದೇ ರೀತಿ ಇಲ್ಲೋರ್ವ ಅಭಿಮಾನಿಯು ಆರ್ಸಿಬಿ ಈ ಬಾರಿಯಾದರೂ ಕಪ್ ಗೆಲ್ಲಬೇಕೆಂದು ದೇವರ ಮೊರೆ ಹೋಗಿದ್ದಾನೆ.
ಹಿರಿಯೂರಿನ ತೇರುಮಲ್ಲೇಶ್ವರ ಸ್ವಾಮಿ ರಥೋತ್ಸವದ ವೇಳೆ ತಮ್ಮ ಬೇಡಿಕೆಯನ್ನು ಇಡೇರಿಸುವಂತೆ ತೇರಿಗೆ ಬಾಳೆಹಣ್ಣನ್ನು ಎಸೆದು ಹರಕೆ ಕಟ್ಟಿಕೊಳ್ಳುವುದು ವಾಡಿಕೆ. ಈ ವೇಳೆ ಅಭಿಮಾನಿವೋರ್ವ ಬಾಳೆಹಣ್ಣು ಮತ್ತು 10 ರೂ. ನೋಟಿನ ಮೇಲೆ ಜೈ ಆರ್ಸಿಬಿ ಎಂದು ಬರೆದು ತೇರಿಗೆ ಹರಕೆ ಕಟ್ಟಿಕೊಂಡಿರುವ ಅಪರೂಪದ ಘಟನೆ ನಡೆದಿದೆ.
ಶುಕ್ರವಾರ ಹಿರಿಯೂರಿನ ತೇರುಮಲ್ಲೇಶ್ವರ ಸ್ವಾಮಿ ರಥೋತ್ಸವ ಅದ್ಧೂರಿಯಾಗಿ ನಡೆಸಲಾಯಿತು. ಈ ವೇಳೆ ಅಭಿಮಾನಿ ಈ ವರ್ಷದ ಐಪಿಎಲ್ನಲ್ಲಿ ಆರ್ಸಿಬಿ ತಂಡ ಚಾಂಪಿಯನ್ ಆಗಲೆಂದು ಪ್ರಾರ್ಥಿಸಿ ರಥೋತ್ಸವದಲ್ಲಿ ಹರಕೆ ಕಟ್ಟಿಕೊಳ್ಳುವ ಮೂಲಕ ಸಾರ್ವಜನಿಕರ ಗಮನ ಸೆಳೆದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನು ಓದಿ:ವಿಜಯ್ ಹಜಾರೆ ಟ್ರೋಫಿಯಲ್ಲಿ ಕೇರಳ ಮೇಲೆ ಕರ್ನಾಟಕದ ಸವಾರಿ.. ಕ್ವಾರ್ಟರ್ ಫೈನಲ್ಗೆ ಲಗ್ಗೆ!