ಚಿತ್ರದುರ್ಗ: ವಿವಿ ಸಾಗರದಲ್ಲಿ ಬಲೆ ಬೀಸಿದ ಮೀನುಗಾರರಿಗೆ 20 ಕೆಜಿ ತೂಕದ ಭೀಮ ಗಾತ್ರದ ಮೀನು ಸಿಕ್ಕಿದೆ.
ಜಿಲ್ಲೆಯ ಹಿರಿಯೂರಿನಲ್ಲಿರುವ ವಿವಿ ಸಾಗರದಲ್ಲಿ ನೀರಿನ ಮಟ್ಟ ಪಾತಾಳ ಕಂಡಿದೆ. ಇದನ್ನೇ ಬಂಡವಾಳವಾಗಿಸಿಕೊಂಡ ಸ್ಥಳೀಯ ಮೀನುಗಾರರು ಮೀನು ಹಿಡಿಯಲು ಮುಂದಾಗಿದ್ದಾರೆ. ನೀರಿನಮಟ್ಟ ಕುಸಿತದಿಂದ ಸಾಕಷ್ಟು ಮೀನುಗಳು ಸುಲಭವಾಗಿ ಬಲೆಗೆ ಬೀಳುತ್ತಿವೆ.
ಇದಕ್ಕೆ ತಾಜಾ ಉದಾಹರಣೆ ಎಂಬಂತೆ 20 ಕೆಜಿ ಮೀನು ಬಲೆಗೆ ಬಿದ್ದಿದ್ದು, ಮೀನುಗಾರರು ಸಂತಸ ವ್ಯಕ್ತಪಡಿಸಿದ್ದಾರೆ. ಇದರ ಫೋಟೊಗಳು ಕೂಡ ಜಿಲ್ಲೆಯಾದ್ಯಂತ ಸಕತ್ ವೈರಲ್ ಆಗಿವೆ.