ಚಿತ್ರದುರ್ಗ: ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುತ್ತಿದ್ದ ಬರದ ನಾಡಿನ ಜೀವನಾಡಿ ವೇದಾವತಿ ನದಿಗೆ ಗಂಗೆ ಹರಿದಿದ್ದು, ಚಳ್ಳಕೆರೆ ಹಾಗೂ ಹಿರಿಯೂರು ತಾಲೂಕಿನ ಜನರ ಕನಸು ಕೊನೆಗೂ ನನಸಾಗಿದೆ.
ಚಳ್ಳಕೆರೆ ತಾಲೂಕಿನ ವೇದಾವತಿ ನದಿಗೆ 0.25 ಟಿಎಂಸಿ ನೀರು ಹರಿಸುವುದಕ್ಕೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಚಾಲನೆ ನೀಡಿದರು. ಇದರಿಂದ ಹಿರಿಯೂರು ತಾಲೂಕಿನ ಕಸವನಹಳ್ಳಿ, ಬಿದರಿಕೆರೆ ಬ್ಯಾಡ್ರಾಹಳ್ಳಿ, ಕತ್ರಿಕೆನಹಳ್ಳಿ ಶಿಡ್ಲಯ್ಯನ ಕೋಟೆ ಸೇರಿದಂತೆ ಚಳ್ಳಕೆರೆ ತಾಲೂಕಿನ ಚೌಳೂರು, ಬೊಂಬೇರನಹಳ್ಳಿ, ಪರಶುರಾಮ ಪುರದ ಗ್ರಾಮದ ಜನರಿಗೆ ಉಪಯೋಗವಾಗಲಿದೆ.
ಈ ವೇಳೆ ಮಾತನಾಡಿದ ಜಾರಕಿಹೊಳಿ, ಭದ್ರಾ ಮೇಲ್ದಂಡೆ ವಿಷಯಕ್ಕೆ ಸಂಬಂಧಿಸಿದ ಯಾವುದೇ ಕಾಮಗಾರಿ ಇದ್ದರೂ ತ್ವರಿತಗತಿಯಲ್ಲಿ ಮುಗಿಸಲಿಕ್ಕೆ ಸೂಚನೆ ನೀಡುತ್ತೇನೆ. ಇನ್ನು ನೀರಾವರಿಗೆ ಸಂಬಂಧಪಟ್ಟಂತೆ ನುರಿತ ತಜ್ಞರ ಬಳಿ ಸಲಹೆ ಪಡೆದು ಉತ್ತಮವಾಗಿ ಕಾರ್ಯನಿರ್ವಹಿಸಲಾಗುವುದು ಎಂದರು.