ಚಿಕ್ಕಮಗಳೂರು: ಅಸಭ್ಯ ವರ್ತನೆ ತೋರಿದ ವ್ಯಕ್ತಿಗೆ ಮಹಿಳೆ ಧರ್ಮದೇಟು ನೀಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೌಡಳ್ಳಿಯಲ್ಲಿ ನಡೆದಿದೆ.
ಅಂಗನವಾಡಿ ಕಾರ್ಯಕರ್ತೆ ಕಾವ್ಯ ಎಂಬವರ ಜೊತೆ ಪುಟ್ಟಣ್ಣ ಎಂಬಾತ ಅಸಭ್ಯ ವರ್ತನೆ ತೋರಿದ್ದಾನೆ ಎಂದು ಆರೋಪಿಸಲಾಗಿದೆ. ವ್ಯಕ್ತಿಗೆ ನಡು ರಸ್ತೆಯಲ್ಲಿಯೇ ಮಹಿಳೆ ಚಪ್ಪಲಿ ಏಟು ನೀಡಿದ್ದಾಳೆ. ಈ ವೇಳೆ ಸ್ಥಳೀಯರು ಸಹ ಆರೋಪಿಗೆ ಛೀಮಾರಿ ಹಾಕಿದ್ದಾರೆ.