ETV Bharat / state

ಸಂದರ್ಭ ಬಂದ್ರೆ ಯಾವ ಪರಿಸ್ಥಿತಿಯನ್ನಾದ್ರೂ ಎದುರಿಸುತ್ತೇವೆ: ಸಿ ಟಿ ರವಿ

ಬಿಜೆಪಿ ಪಾಳಯದಲ್ಲಿ ಎದ್ದಿರುವ ಅಸಮಾಧಾನದ ಕುರಿತು ಸಚಿವ ಸಿ ಟಿ ರವಿ ಪ್ರತಿಕ್ರಿಯಿಸಿದ್ದಾರೆ. ಸ್ವಾಭಾವಿಕವಾಗಿ ತುಂಬಾ ಜನ ಸಿನಿಯರ್ ಗಳು ಇದ್ದಾಗ ಅಸಮಾಧಾನ ಇರುತ್ತೆ. ಅಧಿಕಾರ ಕೊಟ್ಟು ಎಲ್ಲರಿಗೂ ಸಮಾಧಾನ ಮಾಡೋಕೆ ಆಗದೇ ಇರಬಹುದು. ಆದರೇ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ಸಂದರ್ಭ ಬಂದರೆ ಯಾವ ಪರಿಸ್ಥಿತಿಯನ್ನೂ ಬೇಕಾದರೂ ಎದುರಿಸುತ್ತೇವೆ; ಸಿ ಟಿ ರವಿ
author img

By

Published : Aug 21, 2019, 10:53 PM IST

ಚಿಕ್ಕಮಗಳೂರು: ನಮ್ಮ ಪಕ್ಷದಲ್ಲೂ ತುಂಬಾ ಜನ ಸಿನಿಯರ್ಸ್​ ಇದ್ದು, ಅಸಮಾಧಾನ ಕಂಡುಬರೋದು ಸಾಮಾನ್ಯ. ಅಧಿಕಾರ ಕೊಟ್ಟು ಎಲ್ಲರಿಗೂ ಸಮಾಧಾನ ಮಾಡೋಕೆ ಆಗದೇ ಇರಬಹುದು. ಆದ್ರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮಾಧಾನ ಮಾಡೋ ಕೆಲಸವನ್ನು ಪಾರ್ಟಿ ಹಿಂದೆಯೂ ಮಾಡಿದೆ. ಮುಂದೆಯೂ ಮಾಡುತ್ತೆ. ನಮ್ಮದು ಶೂನ್ಯದಿಂದ ಬೆಳೆದ ಪಾರ್ಟಿ, ಸಂದರ್ಭ ಬಂದ್ರೆ ಯಾವ ಪರಿಸ್ಥಿತಿಯನ್ನೂ ಬೇಕಾದರೂ ಎದುರಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ರು.

ಸಂದರ್ಭ ಬಂದರೆ ಯಾವ ಪರಿಸ್ಥಿತಿಯನ್ನೂ ಬೇಕಾದರೂ ಎದುರಿಸುತ್ತೇವೆ: ಸಿ ಟಿ ರವಿ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 1985 ರಲ್ಲಿ ಯಡಿಯೂರಪ್ಪನವರು ಒಬ್ಬರೇ ಬಿಜೆಪಿ ಶಾಸಕರಾಗಿದ್ದರು. 1984 ರಲ್ಲಿ ಎಲ್​ ಕೆ ಅಡ್ವಾಣಿ, ವಾಜಪೇಯಿ ಕೂಡ ಸೋತಿದ್ದರು. ದೇಶದಲ್ಲಿ ನಮಗೆ ಸಿಕ್ಕಿದ್ದೇ ಎರಡು ಸೀಟು. ಆದರೂ ನಾವು ವಿಚಲಿತರಾಗಿರಲಿಲ್ಲ. ಅಂದು ನಮ್ಮ ಪಾರ್ಟಿ ಬಾಗಿಲು ಹಾಕಲಿಲ್ಲ. ಹಾಗಾಗಿಯೇ ಇಂದು ಪಾರ್ಟಿ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆದಿದೆ ಎಂದರು.

ಯೋಗ - ಯೋಗ್ಯತೆಯ ಕುರಿತು ಪ್ರತಿಕ್ರಿಯಿಸಿದ ಸಿ ಟಿ ರವಿಯವರು, ಯೋಗ್ಯತೆ ಇರೋರು ತುಂಬಾ ಜನ ಇದ್ದಾರೆ. ಈಗ ಅವಕಾಶ ಸಿಕ್ಕಿರೋದು ಯೋಗ ಇದ್ದೋರಿಗೆ ಮಾತ್ರ. ಮುಂದೆ ನಿಮಗೂ ಯೋಗ ಕೂಡಿ ಬಂದಾಗ ಬಡ್ಡಿ ಸಮೇತ ಸಿಗುತ್ತೆ ಎಂದು ಹೇಳಿದ್ದೇನೆ ಸ್ಪಷ್ಟನೆ ನೀಡಿದರು.

Intro:Kn_Ckm_07_Ct Ravi_av_7202347Body:

ಚಿಕ್ಕಮಗಳೂರು :-

ಬಿಜೆಪಿ ಪಾಳಯದಲ್ಲಿ ಎದ್ದಿರುವ ಅಸಮಾಧಾನದ ಕುರಿತು ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಚಿವ ಸಿ ಟಿ ರವಿ ಸ್ವಾಭಾವಿಕವಾಗಿ ತುಂಬಾ ಜನ ಸಿನಿಯರ್‍ ಗಳು ಇದ್ದಾಗ ಅ ಸಮಾಧಾನ ಇರುತ್ತೆ. ಅಧಿಕಾರ ಕೊಟ್ಟೆ ಎಲ್ಲರಿಗೂ ಸಮಾಧಾನ ಮಾಡೋಕೆ ಆಗದೇ ಇರಬಹುದು.ಆದರೇ ವಿಶ್ವಾಸಕ್ಕೆ ತೆಗೆದುಕೊಂಡು ಸಮಾಧಾನ ಮಾಡೋ ಕೆಲಸವನ್ನು ಪಾರ್ಟಿ ಹಿಂದೆಯೂ ಮಾಡಿದೆ. ಮುಂದೆಯೂ ಮಾಡುತ್ತೆ, ಒಂದು ವೇಳೆ, ಸಂದರ್ಭ ಬಂದರೇ ಯಾವ ಪರಿಸ್ಥಿತಿಯನ್ನೂ ಬೇಕಾದರೂ ಎದುರಿಸುತ್ತೇವೆ ಎಂದೂ ಹೇಳಿದರು. ನಮ್ಮ ಪಾರ್ಟಿ ಶೂನ್ಯದಿಂದ ಬೆಳೆದ ಪಾರ್ಟಿ. 1985 ರಲ್ಲಿ ಯಡಿಯೂರಪ್ಪನವರು ಒಬ್ಬರೆ ಇದ್ದರು. 1984 ರಲ್ಲಿ ಅಡ್ವಾನಿ, ವಾಜಪೇಯಿಯೂ ಸೋತಿದ್ದರು. ದೇಶದಲ್ಲಿ ನಮಗೆ ಸಿಕ್ಕಿದ್ದೇ ಎರಡು ಸೀಟು. ವಿಚಲಿತರಾಗಲಿಲ್ಲ. ಅಂದು ನಮ್ಮ ಪಾರ್ಟಿ ಬಾಗಿಲು ಹಾಕಲಿಲ್ಲಾ. ವಿಚಲಿತರಾಗದೆ ಇದ್ದಿದ್ದಕ್ಕೆ ಇಂದು ಪಾರ್ಟಿ ಇಷ್ಟು ದೊಡ್ಡದಾಗಿ ಬೆಳೆದಿದೆ ಎಂದೂ ಹೇಳಿದರು. ಯೋಗ - ಯೋಗ್ಯತೆ ಪ್ರತಿಕ್ರಿಯೆಗೆ ಉತ್ತರಿಸಿದೆ ಸಿ.ಟಿ.ರವಿ, ಯೋಗ್ಯತೆ ಇರೋರು ಇದ್ದಾರೆ. ತುಂಬಾ ಯೋಗ್ಯತೆ ಇರೋರು ಇದ್ದಾರೆ. ಈಗ ಸಿಕ್ಕಿರೋದು ಯೋಗ ಇದ್ದೋರಿಗೆ ಮಾತ್ರ. ಮುಂದೆ ನಿಮ್ಮಗೂ ಯೋಗ ಕೂಡಿ ಬಂದಾಗ ಬಡ್ಡಿ ಸಮೇತ ಕೂಡಿ ಬರುತ್ತೆ ಎಂದು ಹೇಳಿದ್ದೇನೆ.ಈ ಕ್ಯಾಪ್ಷನ್ ಕೊಟ್ಟ ಪುಣ್ಯಾತ್ಮರನ್ನು ನೋಡಿದೆ. ನನ್ನ ಸ್ಟೇಟ್‍ಮೆಂಟ್‍ನಲ್ಲಿ ತಪ್ಪಿರಲಿಲ್ಲ. ಕ್ಯಾಪ್ಷನ್‍ನಲ್ಲಿ ತಪ್ಪಿತ್ತು. ನಾನು ಉದ್ವೇಗದಲಾಗಲೀ, ತಪ್ಪು ಅರ್ಥ ಬರುವಂತಾಗಲಿ ಮಾತನಾಡೋನಲ್ಲ. ಕೆಲವರ ಉದ್ದೇಶ ತಪ್ಪಾಗಿ ತೋರಿಸಬೇಕು ಅಂತಿದ್ದಾಗ, ನಾನು ಒಳ್ಳೆದು ಮಾಡಿದರೂ ತಪ್ಪಾಗಿ ತೋರಿಸುತ್ತಾರೆ. ಅವರ ಉದ್ದೇಶವೇ ಕೆಟ್ಟದಿರುತ್ತೆ. ಒಳ್ಳೆದು ಮಾಡಿದರೂ ಕೆಟ್ಟದ್ದಾಗಿ ತೋರಿಸಬೇಕು ಅಂತಾ ಮನಸ್ಥಿತಿಯ ಜನರು ಇರುತ್ತಾರೆ ಅವರಿಗೆ ಸದ್ಯಕ್ಕೆ ಔಷಧಿ ಇಲ್ಲ ಎಂದೂ ಚಿಕ್ಕಮಗಳೂರಿನಲ್ಲಿ ಹೇಳಿದರು......

byte:-1 ಸಿ.ಟಿ.ರವಿ............ ಸಚಿವ

Conclusion:ರಾಜಕುಮಾರ್.......
ಈ ಟಿವಿ ಭಾರತ್.....
ಚಿಕ್ಕಮಗಳೂರು.....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.