ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದರೆ, ಇತ್ತ ಬಯಲು ಸೀಮೆ ಭಾಗದಲ್ಲಿ ಭೂಮಿಯೊಳಗಿಂದ ನೀರು ಉಕ್ಕಿ ಹರಿಯುತ್ತಿದೆ.
ಭೂಮಿಯಿಂದ ನೀರು ಉಕ್ಕುತ್ತಿದ್ದು, ಪ್ರಕೃತಿಯ ವೈಶಿಷ್ಟ್ಯಕ್ಕೆ ಚಿಕ್ಕಮಗಳೂರು ಜಿಲ್ಲೆ ಸಾಕ್ಷಿಯಾಗಿದೆ. ಭೂಮಿಯಲ್ಲಿ ಅಂತರ್ಜಲ ಹೆಚ್ಚಾಗಿರುವ ಕಾರಣ ಬೋರ್ ವೆಲ್ ನಿಂದ ನೀರು ತಾನಾಗಿಯೇ ಉಕ್ಕಿ ಹರಿಯುತ್ತಿದೆ.
ಕಡೂರು ತಾಲೂಕಿನ ಎಮ್ಮೆದೊಡ್ಡಿ ಗ್ರಾಮದ ರಮೇಶ್ ಎಂಬುವರ ತೋಟದ ಬೋರ್ವೆಲ್ನಲ್ಲಿ ನೀರು ತನ್ನಿಂತಾನೇ ಉಕ್ಕಿ ಬರುತ್ತಿದೆ. ಮಲೆನಾಡು ಭಾಗಕ್ಕೆ ಹೋಲಿಕೆ ಮಾಡಿದರೆ ಬಯಲು ಸೀಮೆ ಭಾಗದಲ್ಲಿ ಮಳೆ ಸರಿಯಾಗಿ ಬಂದಿಲ್ಲ. ಸದ್ಯಕ್ಕೆ ಸುರಿದಿರುವ ಮಳೆಯಿಂದ ಬೋರ್ ವೆಲ್ನಲ್ಲಿ ನೀರು ಉಕ್ಕಿ ಹರಿಯುತ್ತಿದ್ದು ಸ್ಥಳೀಯ ಆಶ್ಚರ್ಯ ಪಡುತ್ತಿದ್ದಾರೆ.