ETV Bharat / state

ಬೆಳಗಾವಿಯಲ್ಲಿ ಉದ್ದೇಶ ಪೂರ್ವಕವಾಗಿ ಗಲಭೆ ಸೃಷ್ಟಿ ಮಾಡಲಾಗ್ತಿದೆ: ಶೋಭಾ ಕರಂದ್ಲಾಜೆ ಆರೋಪ - ಬೆಳಗಾವಿ ಗಲಭೆ ಕುರಿತು ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ

ಬೆಳಗಾವಿಯಲ್ಲಿ ಎಂಇಎಸ್​​ ಕಿಡಿಗೇಡಿಗಳು ನಡೆಸುತ್ತಿರುವ ಗಲಭೆ ಕುರಿತಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಚಿಕ್ಕಮಗಳೂರಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

Shobha Karandlaje reaction about belagavi riots
ಬೆಳಗಾವಿ ಗಲಭೆ ಕುರಿತಂತೆ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ
author img

By

Published : Dec 22, 2021, 3:13 PM IST

ಚಿಕ್ಕಮಗಳೂರು: ಉದ್ದೇಶ ಪೂರ್ವಕವಾಗಿ ಬೆಳಗಾವಿಯಲ್ಲಿ ಎಂಇಎಸ್​ ಕಿಡಿಗೇಡಿಗಳು ಗಲಭೆ ಹಬ್ಬಿಸಲಾಗುತ್ತಿದೆ. ಎಂಇಎಸ್ ಜೊತೆ ಕಾಂಗ್ರೆಸ್ ಸೇರಿದೆ ಅನ್ನೋ ಗುಮಾನಿ ಕಾಡ್ತಾ ಇದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಬೆಳಗಾವಿ ಗಲಭೆ ಕುರಿತಂತೆ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಂಇಎಸ್ ಜೊತೆ ಕಾಂಗ್ರೆಸ್ ಸೇರಿದೆ ಅನ್ನೋ ಗುಮಾನಿ ಕಾಡ್ತಾ ಇದೆ. ಬಿಜೆಪಿ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಹಾಗೂ ಅಧಿವೇಶನವನ್ನು ವಿಫಲ ಮಾಡಲು ವ್ಯವಸ್ಥಿತವಾಗಿ ಷಡ್ಯಂತ್ರ ಮಾಡಲಾಗುತ್ತಿದೆ. ಇದರ ಸಮಗ್ರ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಎಂಇಎಸ್ ಇರಬೇಕಾದದ್ದು ಮಹಾರಾಷ್ಟ್ರದಲ್ಲಿ, ಕರ್ನಾಟಕದಲ್ಲಿ ಅಲ್ಲ. ರಾಜ್ಯದಲ್ಲಿ ಕನ್ನಡಿಗರು, ಮರಾಠಿಗರು ಅನ್ನೋ ಭೇದಭಾವವಿಲ್ಲ. ಎಲ್ಲ ಯೋಜನೆಯಲ್ಲೂ ಏಕ ಪ್ರಕಾರವಾಗಿ ಅನುದಾನ ನೀಡಲಾಗುತ್ತಿದೆ. ಬೆಳಗಾವಿ, ಬೀದರ್, ಚಿಕ್ಕೋಡಿ ಭಾಗದ ಮಠಾರಿಗರಿಗೆ ರಾಜ್ಯ ಸರ್ಕಾರ ಯಾವುದೇ ಅನ್ಯಾಯ ಮಾಡಿಲ್ಲ. ಅನಾವಶ್ಯಕ ರಾಜಕೀಯ ಪ್ರೇರಿತ ಗಲಭೆಯಿಂದ ಎಚ್ಚರಗೊಳಬೇಕು. ದೇಶದ್ರೋಹದ ಕಾಯ್ದೆಯಡಿ ಕ್ರಮ ಕೈಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಮಹಾರಾಷ್ಟ್ರ ಸರ್ಕಾರದ ಕುಮ್ಮಕ್ಕಿನಿಂದಲೇ ಈ ರೀತಿ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ರಾಜ್ಯದಲ್ಲಿ ಎಂಇಎಸ್​​ ನಿಷೇಧಕ್ಕೆ ಆಗ್ರಹ: ಕನ್ನಡಪರ ಸಂಘಟನೆಗಳಿಂದ ಡಿ. 31ರಂದು ಕರ್ನಾಟಕ ಬಂದ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.