ಚಿಕ್ಕಮಗಳೂರು: ಹುಲಿಯ ಉಗುರು, ಹಲ್ಲು, ಕೋರೆಹಲ್ಲು, ಚರ್ಮ ಮಾರಲು ಯತ್ನಿಸುತ್ತಿದ್ದವರನ್ನು ಅರಣ್ಯಾಧಿಕಾರಿಗಳು ಬಂಧಿಸಿ, ಅವರಿಂದ 10 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಹುಲಿಯ ಚರ್ಮ, ಉಗುರುಗಳನ್ನು ಮನೆಯ ಅಲಂಕಾರಕ್ಕೆ ಬಳಸಿದರೆ, ಅದರ ಮೂಳೆ ಸೇರಿದಂತೆ ಕೆಲ ಭಾಗಗಳನ್ನು ಔಷಧಿಗಾಗಿ ಬಳಸಲಾಗುತ್ತದೆ. ಹಾಗಾಗಿ ಪ್ರಾಣಿಗಳ ಬೇಟೆಗಾರರ ಸಂಖ್ಯೆ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.
ಜಿಲ್ಲೆಯಲ್ಲಿ ಹುಲಿ ಬೇಟೆಗಾರರ ಜಾಡು ಹರಡಿದೆಯಾ ಎಂಬ ಅನುಮಾನ ದಟ್ಟವಾಗಿದೆ. 2017ರಲ್ಲೂ ಕೂಡ ಹುಲಿ, ಇತರೆ ಪ್ರಾಣಿಗಳ ಮೂಳೆಗಳನ್ನು ಸಾಗಿಸುವಾಗ ಲಕ್ಷಾಂತರ ಮೌಲ್ಯದ ವಸ್ತು ಸಮೇತ ಕಳ್ಳರು ಸಿಕ್ಕಿಬಿದ್ದಿದ್ದರು. ಇದೀಗ ಮತ್ತೆ ಹುಲಿಯ ಉಗುರು, ಹಲ್ಲು, ಕೋರೆಹಲ್ಲು, ಚರ್ಮ ಮಾರಲು ಯತ್ನಿಸುತ್ತಿದ್ದವರನ್ನು ಬಂಧಿಸಲಾಗಿದೆ. ಅವರಿಂದ 10 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೂರ್ವಜರು ಹುಲಿ ಚರ್ಮ, ಹಲ್ಲು, ಉಗುರುಗಳನ್ನು ಮನೆ ಅಲಂಕಾರಕ್ಕೆ ಬಳಸುತ್ತಿದ್ದರು. ಉಗುರನ್ನು ಕೊರಳಿಗೆ ಕಟ್ಟಿಕೊಂಡ್ರೆ ಭಯವಾಗುವುದಿಲ್ಲ ಎಂದೆಲ್ಲಾ ಒಂದಿಷ್ಟು ನಂಬಿಕೆ ಇಟ್ಟುಕೊಂಡಿದ್ದರು. ಅಂತಹವರನ್ನು ಹುಡುಕಿ ಹುಲಿಯ ಮೂಳೆ ಹಾಗೂ ಉಗುರುಗಳನ್ನು ಮಾರಾಟ ಮಾಡುವ ಜಾಲ ದಿನದಿಂದ ದಿನಕ್ಕೆ ಹೆಚ್ಚಾಗಿ ಹರಡುತ್ತಿದೆ.
ಓದಿ: ಕುಡಿಬೇಡ ಎಂದು ಬುದ್ಧಿವಾದ ಹೇಳಿದ ತಂದೆಯನ್ನೇ ಹತ್ಯೆ ಮಾಡಿದ ಪಾಪಿ ಮಗ
ಹುಲಿ ಯಾವುದಾದರೂ ಕಾರಣಗಳಿಂದ ಅರಣ್ಯದಲ್ಲಿಯೇ ಮೃತಪಟ್ಟರೆ ಅದನ್ನು ಅಧಿಕಾರಿಗಳು ಸುಟ್ಟು, ನಂತರ ಅದರ ಬೂದಿಯೂ ಸಿಗದಂತೆ ಅಧಿಕಾರಿಗಳು ಮಾಡುತ್ತಾರೆ. ಆದ್ರೆ ಮನುಷ್ಯ ಮೂಕ ಪ್ರಾಣಿಗಳನ್ನು ಕೊಂದು ತನ್ನ ಆಸೆಗಳನ್ನು ಈ ರೀತಿಯಾಗಿ ಈಡೇರಿಸಿಕೊಳ್ಳುವುದಕ್ಕೆ ಮುಂದಾಗುತ್ತಿರುವುದು ಮಾತ್ರ ನಿಜಕ್ಕೂ ನೋವಿನ ಸಂಗತಿ ಅನ್ನೋದು ಪರಿಸರವಾದಿಗಳ ಬೇಸರವಾಗಿದೆ.