ಚಿಕ್ಕಮಗಳೂರು: 3 ಗಂಟೆ ಸಿನಿಮಾದಲ್ಲಿ ನಟಿಸೋರು ನಿಜವಾದ ಹೀರೋಗಳಲ್ಲ ದೇಶಕ್ಕಾಗಿ ಪ್ರಾಣ ನೀಡೋ ಸೈನಿಕ ಹಾಗೂ ಜಮೀನಿನಲ್ಲಿ ಕೆಲಸ ಮಾಡುವ ರೈತ ನಿಜವಾದ ಹೀರೋ ಎಂದು ಜಿಲ್ಲೆಯಲ್ಲಿ ನಡೆದ ಸ್ವಾಮಿ ವಿವೇಕನಂದ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಅಮರ ಯೋಧ ಹನುಮಂತಪ್ಪ ಕೊಪ್ಪದ್ ಪತ್ನಿ ಮಹಾದೇವಿ ಹೇಳಿದ್ದಾರೆ.
ಜಿಲ್ಲೆಯ ವಂದೇ ಮಾತರಂ ಟ್ರಸ್ಟ್ ವತಿಯಿಂದ ಆಯೋಜನೆ ಮಾಡಿದ್ದ ಸ್ವಾಮಿ ವಿವೇಕನಂದ ಜನ್ಮ ದಿನೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಮೃತ ಯೋಧ ಹನುಮಂತಪ್ಪ ಕೊಪ್ಪದ್ ಅವರ ಪತ್ನಿ ಮಹಾದೇವಿ ಕಾರ್ಯಕ್ರಮದಲ್ಲಿ ಮಾತನಾಡಿ ರಿಯಲ್ ಹೀರೋಗಳು ಅಂದರೆ ಸಿನಿಮಾ ನಟರಲ್ಲ ನಿಜಕ್ಕೂ ರಿಯಲ್ ಹೀರೋಗಳು ಅಂದ್ರೆ ಸೈನಿಕರು ಮತ್ತು ರೈತರಾಗಿದ್ದಾರೆ ಎಂದರು.
ಇಂದಿನ ಯುವಕರಿಗೆ ಸಿನಿಮಾ ನಟರೇ ಹೀರೋಗಳಾಗಿದ್ದಾರೆ. ಗಡಿ ಕಾಯುವ ಸೈನಿಕರು ತನ್ನ ಮನೆಗಾಗಿ ದುಡಿಯುವುದಿಲ್ಲ, ತನ್ನ ಬಂಧುಗಳಿಗಾಗಿ ದುಡಿಯುವುದಿಲ್ಲ. ಸಿನಿಮಾ ನಟರು ಬರೀ ನಟರು ಅಷ್ಟೇ. ಇಂದಿನ ಯುವ ಸಮೂಹ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಯುವಕರಿಗೆ ಸಲಹೆಯನ್ನು ನೀಡಿದರು.