ಚಿಕ್ಕಮಗಳೂರು: ಎದುರುಗಡೆ ಮನೆ ವ್ಯಕ್ತಿಯಿಂದ ಪ್ರತಿ ನಿತ್ಯ ಮಾನಸಿಕ ಕಿರುಕುಳ ಹಿನ್ನೆಲೆ ಬಾಲಕಿ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಎಸ್. ಬಿದರೆ ಗ್ರಾಮದಲ್ಲಿ ನಡೆದಿದೆ.
ಪೂರ್ಣಿಮಾ (16) ಮೃತ ದುರ್ದೈವಿ. ಪ್ರತಿನಿತ್ಯ ಪೂರ್ಣಿಮಾ ಶಾಲೆಗೆ ಹೋಗುವ ವೇಳೆ ರಂಗನಾಥ್ ಶೆಟ್ಟಿ ಎಂಬಾತ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪವಿದೆ. ಈ ಹಿನ್ನೆಲೆ ಬಾಲಕಿ ಮನೆಯವರಿಗೆ ವಿಷಯ ತಿಳಿಸಿದರೂ ಪ್ರಯೋಜನವಾಗಿರಲಿಲ್ಲ.
ಇದರಿಂದ ಮನನೊಂದ ಪೂರ್ಣಿಮಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಕುರಿತು ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.