ETV Bharat / state

ಆರ್​ಎಸ್​ಎಸ್​ ದೇಶಪ್ರೇಮಿ ಸಂಘಟನೆ: ವಿಧಾನ ಪರಿಷತ್ ಸದಸ್ಯ ಪ್ರಾಣೇಶ್ - ಈಟಿವಿ ಭಾರತ ಕನ್ನಡ

ಆರ್​ಎಸ್​ಎಸ್​ ದೇಶಪ್ರೇಮಿ ಸಂಘಟನೆ, ಇದು ದೇಶಕ್ಕಾಗಿ ಹೋರಾಟ ಮಾಡುವ ಕಾರ್ಯದಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರಾಣೇಶ್​ ಹೇಳಿದ್ದಾರೆ.

rss-is-a-patriotic-organization
ಆರ್​ಎಸ್​ಎಸ್​ ದೇಶಪ್ರೇಮಿ ಸಂಘಟನೆ : ವಿಧಾನ ಪರಿಷತ್ ಸದಸ್ಯ ಪ್ರಾಣೇಶ್
author img

By

Published : Sep 28, 2022, 8:45 PM IST

ಚಿಕ್ಕಮಗಳೂರು : ಆರ್​ಎಸ್​ಎಸ್​ ಎಂದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಆರ್​ಎಸ್​ಎಸ್​ ದೇಶಕ್ಕಾಗಿ ಹೋರಾಟ ಮಾಡುವುದು, ದೇಶವನ್ನು ಉಳಿಸುವುದು ಇಂತಹ ಕೆಲಸದಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರಾಣೇಶ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ಪ್ರೇಮ ಇರುವವರನ್ನೇ ಹೊರ ಹಾಕಬೇಕು ಎಂದು ಯೋಚನೆ ಮಾಡುವುದು ಸರಿಯಲ್ಲ ಸಿದ್ದರಾಮಯ್ಯನವರೇ. ಪಿಎಫ್​​ಐ ದೇಶ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಾ ಬಂದಿದೆ. ಅವರು ದೇಶದ ಪರವಾಗಿಲ್ಲ.ದೇಶದ ಪರವಾಗಿ ಯೋಚನೆ ಮಾಡದವರನ್ನು ಹೊರ ಹಾಕುವುದು ದೇಶದ ಕರ್ತವ್ಯವೂ ಕೂಡ ಹೌದು. ಹಾಗಾಗಿ ಪಿಎಫ್ ಐ ಸಂಘಟನೆಯನ್ನು ನಿಷೇಧ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ತೀರ್ಮಾನ ಸರಿಯಾಗಿದೆ. ನಾನು ಈ ತೀರ್ಮಾನವನ್ನು ಸ್ವಾಗತ ಮಾಡುತ್ತೇನೆ ಎಂದು ಇದೇ ವೇಳೆ ಹೇಳಿದರು.

ಇದನ್ನೂ ಓದಿ : ಸಿದ್ದರಾಮಯ್ಯರ ಉಗ್ರಭಾಗ್ಯ ಯೋಜನೆಯಿಂದಲೇ 32ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಕೊಲೆ ಆಯ್ತು: ಸಿ ಟಿ ರವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.