ಚಿಕ್ಕಮಗಳೂರು: ಗಡಿ ಭಾಗದಲ್ಲಿ ಇರುವ ಕನ್ನಡಿಗರು ಮರಾಠಿಗರು ಸಂಯಮದಿಂದ ವರ್ತಿಸಬೇಕು ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.
ವಿವಾದ ದಶಕಗಳದ್ದು, ಆದ್ರೆ ಸಂಬಂಧ ಸಾವಿರಾರು ವರ್ಷಗಳದ್ದು. ಬಿಜೆಪಿ ರಾಷ್ಟ್ರದ ಹಿತದ ಹಿನ್ನೆಲೆಯಲ್ಲಿ ಪ್ರಾದೇಶಿಕ ಭಾವನೆಗಳನ್ನು ಗೌರವಿಸುತ್ತೆ. ಯಾವುದೇ ರಾಜ್ಯಕ್ಕೆ ಅನ್ಯಾಯವಾಗಲು ನಾವು ಅವಕಾಶ ಕೊಡುವುದಿಲ್ಲ. ಸಂಬಂಧವನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡೋಣ. ಅದನ್ನು ಬಿಟ್ಟು ಸಂಘರ್ಷ ಮಾಡಿ ಸಂಬಂಧವನ್ನು ಒಡೆಯುವ ಪ್ರಯತ್ನ ಮಾಡಬಾರದು ಎಂದರು.
ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನಲ್ಲಿ ಸಂಬಂಧಪಟ್ಟಂತೆ ವಿವಾದ ಇದೆ. ಸುಪ್ರೀಂ ಕೋರ್ಟ್ ಯಾವ ತೀರ್ಮಾನ ಕೊಡುತ್ತೆ ಕಾದು ನೋಡೋಣ. ಭಾರತವನ್ನು ಸುರಕ್ಷಿತವಾಗಿ ಇಡುವ ಕುರಿತು ನಮ್ಮ ಆದ್ಯತೆ ಇರಲಿ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಪ್ರತಿಕ್ರಿಯೆ ನೀಡಿದರು.
ಓದಿ: 15 ಲಕ್ಷಕ್ಕೆ ಕೈಚಾಚುವ ದುಸ್ಥಿತಿ ಸಚಿವ ಭೈರತಿ ಬಸವರಾಜು ಅವರಿಗೆ ಬಂದಿಲ್ಲ: ಸಿ ಟಿ ರವಿ