ಚಿಕ್ಕಮಗಳೂರು: ಬಯಲು ಸೀಮೆಯಲ್ಲಿ ನೀರಿಗಾಗಿ ಹಾಹಾಕಾರ ಪಡುತ್ತಿದ್ದರೆ, ಮಲೆನಾಡು ಕೂಡ ಈ ಆರೋಪದಿಂದ ಹೊರತಾಗಿಲ್ಲ ಎಂಬುದು ಇತ್ತೀಚೆಗೆಸಾಬೀತಾಗುತ್ತಿದೆ.
ಹೌದು,ಪಂಚನದಿಗಳ ಉಗಮಸ್ಥಾನವಾಗಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಈಗ ಹನಿ ಹನಿ ನೀರಿಗೂ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ವಿಚಿತ್ರವಾದ ಹವಾಗುಣ ಹೊಂದಿರುವಂಹ ಈ ಜಿಲ್ಲೆ ಬಯಲು ಸೀಮೆ ಮತ್ತು ಮಲೆ ನಾಡು ಭಾಗ ಎರಡನ್ನೂ ಹೊಂದಿದೆ.
ಪ್ರಸ್ತುತ ಇಲ್ಲಿನನೀರಿನ ಸೆಲೆಗಳು ಬತ್ತು ಹೋಗುತ್ತಿದ್ದು ಇದಕ್ಕೆ ಪ್ರಮುಖ ಕಾರಣ ಎಂದರೇ ನದಿಯ ದಡದಲ್ಲಿ ಕೆಲ ಬೆಳೆಗಾರರು ಅಕ್ರಮ ಪಂಪ್ ಸೆಟ್ ಗಳನ್ನು ಇಟ್ಟು ತಮ್ಮ ತೋಟಕ್ಕೆ ನೀರು ಹಾಯಿಸಿಕೊಳ್ಳುತ್ತಿರುವುದು.ಇದರಿಂದ ಸಾಕಷ್ಟು ತೊಂದರೆಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಹನಿಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾದರೂ ಸಂಶಯವಿಲ್ಲ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಉದುಸೆ, ಬೆಟ್ಟದ ಮನೆ, ಹುರುಡಿ, ಕಜ್ಜೆಹಳ್ಳಿ, ಕಡೆಗಳಲ್ಲಿ ಕೆಲ ಎಸ್ವೇಟ್ ಮಾಲೀಕರು ಹೇಮಾವತಿ ಮತ್ತು ಜಪಾವತಿ ನದಿಗೆ ನೀರು ಹಾಯಿಸುವ ಯಂತ್ರವನ್ನು ಇಟ್ಟು ತಮ್ಮ ತೋಟಗಳಿಗೆ ನೀರು ಹಾಯಿಸಿಕೊಳ್ಳುತ್ತಿದ್ದಾರೆ. ಇದರಿಂದ ನದಿಯ ನೀರೆ ಬತ್ತಿಹೋಗುತ್ತಿದ್ದು,ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಇನ್ನೂ ಈ ಬಗ್ಗೆ ಮಾಹಿತಿ ಇದ್ದರೂ ಅಧಿಕಾರಿಗಳು ಮಾತ್ರ ಜಾಣಕುರುಡುತನ ತೋರುತ್ತಾ ನಿರ್ಲಕ್ಷ್ಯ ಪ್ರದರ್ಶಿಸಿದ್ದಾರೆ. ಇನ್ನಾದರೂಅಧಿಕಾರಿಗಳು ಅಕ್ರಮ ಪಂಪ್ಸೆಟ್ ಇಟ್ಟು ನೀರು ಹಾಯಿಸಿಕೊಳ್ಳುತ್ತಿರುವವರ ವಿರುದ್ಧ ಕ್ರಮ ಜರುಗಿಸಿ, ನದಿಯ ನೀರನ್ನು ಸಂರಕ್ಷಿಸಬೇಕು ಎಂದುಸ್ಥಳೀಯರು ಆಗ್ರಹಿಸುತ್ತಿದ್ದಾರೆ.