ETV Bharat / state

ಕೆಜೆಪಿ ಸಮಾವೇಶದಲ್ಲೂ ಸಿದ್ದರಾಮೋತ್ಸವಕ್ಕಿಂತ ಜಾಸ್ತಿ ಜನ ಸೇರಿದ್ದರು, ಆದರೆ ಗೆದ್ದಿದ್ದು ಆರೇ ಸೀಟು: ಮಾಧುಸ್ವಾಮಿ - Idga Maidan Controversy

ಕೆಜೆಪಿ ಸಮಾವೇಶಕ್ಕೆ ಹೋಲಿಸಿದರೆ ಸಿದ್ದರಾಮೋತ್ಸವದಲ್ಲಿ ಅಷ್ಟು ಜನ ಇರಲಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದವರು. ಆ ಭಾಗದಲ್ಲಿ ಅಪರೂಪಕ್ಕೆ ಒಂದು ಸಮಾವೇಶ ಮಾಡಿದಾಗ ಜನ ಬರುತ್ತಾರೆ. ಅದೆಲ್ಲವೂ ಮತವಾಗಿ ಬದಲಾಗುತ್ತೆ ಎಂದು ಲೆಕ್ಕ ಮಾಡಲು ಆಗುವುದಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದರು.

ಮಾಧುಸ್ವಾಮಿ
madhuswamy
author img

By

Published : Aug 12, 2022, 9:47 AM IST

ಚಿಕ್ಕಮಗಳೂರು: ನಾವು ಕೆಜೆಪಿ ಕಟ್ಟಿದ್ದಾಗ ಹಾವೇರಿಯಲ್ಲಿ ನಡೆದ ಸಮಾವೇಶದಲ್ಲಿ ಸಿದ್ದರಾಮೋತ್ಸವಕ್ಕಿಂತ ಜಾಸ್ತಿ ಜನ ಸೇರಿದ್ದರು. ಆದರೆ, ಅಂದು ಗೆದಿದ್ದು ಆರೇ ಸೀಟು ಎಂದು ಕಾನೂನು ಸಚಿವ ಮಾಧುಸ್ವಾಮಿ ಕಾಂಗ್ರೆಸ್​ಗೆ ಟಾಂಗ್ ಕೊಟ್ಟರು.

ಕೆಜೆಪಿ ಕಟ್ಟಿದಾಗ ಹಾವೇರಿ ಸಮಾವೇಶದಲ್ಲಿ ಸಿದ್ದರಾಮೋತ್ಸವಕ್ಕಿಂತ ಹೆಚ್ಚು ಜನ ಸೇರಿದ್ದರು. ಹಾವೇರಿ ಸಮಾವೇಶ ನೋಡಿ ಮುಗಿದೋಯ್ತು, ರಾಜ್ಯ ನಮ್ಮ ಕೈಗೆ ಬಂತು ಎಂದು ಭಾವಿಸಿದ್ದೆವು. ಆದರೆ ಗೆದ್ದಿದ್ದು ಆರೇ ಸೀಟು. ಕೆಜೆಪಿ ಸಮಾವೇಶಕ್ಕೆ ಹೋಲಿಸಿದ್ರೆ ಸಿದ್ದರಾಮಯ್ಯ ಉತ್ಸವದಲ್ಲಿ ಅಷ್ಟು ಜನ ಇರಲಿಲ್ಲ. ಮುಖ್ಯಮಂತ್ರಿ ಆಗಿದ್ದವರು ಆ ಭಾಗದಲ್ಲಿ ಅಪರೂಪಕ್ಕೆ ಒಂದು ಸಮಾವೇಶ ಮಾಡಿದಾಗ ಜನ ಬರುತ್ತಾರೆ. ಅದೆಲ್ಲವೂ ಮತವಾಗಿ ಬದಲಾಗುತ್ತೆ ಎಂದು ಲೆಕ್ಕ ಮಾಡಲು ಆಗುವುದಿಲ್ಲ ಎಂದು ಹೇಳಿದರು.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಚಿವ ಮಾಧುಸ್ವಾಮಿ

ಬಿಜೆಪಿಯಲ್ಲಿ ಸಿಎಂ ಬದಲಾವಣೆ ಎಂದು ಕೆಪಿಸಿಸಿ ಟ್ವೀಟ್ ಮಾಡುತ್ತದೆ ಎಂದರೆ ಅವರು ಅವರ ಕೆಲಸವನ್ನ ಯಾವಾಗ ಮಾಡಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು. ಇನ್ನೊಂದು ಪಕ್ಷ ಅಥವಾ ನಾಯಕರ ಬಗ್ಗೆ ಬೇರೆ ಪಕ್ಷದವರು ಚರ್ಚೆ ಮಾಡುವುದು ರಾಜಕಾರಣಕ್ಕೆ ಗೌರವ ತರಲ್ಲ. ಜನರು ದಡ್ಡರಲ್ಲ, ಎಲ್ಲವನ್ನೂ ನೋಡುತ್ತಿರುತ್ತಾರೆ. ಸಿದ್ದರಾಮಯ್ಯ ಸಿಎಂ ಆಗುತ್ತಾರಾ, ಶಿವಕುಮಾರ್ ಸಿಎಂ ಆಗುತ್ತಾರಾ ಎಂದು ನಾವು ಮಾತನಾಡಿಲ್ಲ ಎಂದರು.

ಬೆಂಗಳೂರಿನ ಈದ್ಗಾ ಮೈದಾನ ವಿವಾದ ಕುರಿತು ಮಾತನಾಡಿದ ಅವರು, ನಾವು ಮೊಹರಂ ಮಾಡಬೇಡಿ, ರಂಜಾನ್ ಮಾಡಬೇಡಿ ಎಂದು ಹೇಳಿಲ್ಲ. ಅದೇ ರೀತಿ ಗಣೇಶೋತ್ಸವ ಮಾಡಬೇಡಿ ಎಂದು ಹೇಳಲು ಆಗುವುದಿಲ್ಲ. ಇನ್ನು ಮೂರು ದಿನ ಕಳೆದಿಲ್ಲ. ನಾವು ಎಲ್ಲಿಯಾದರೂ ಹೇಳಿದ್ವಾ ಮೊಹರಂ ಮಾಡಬೇಡಿ ಎಂದು ಪ್ರಶ್ನಿಸಿದರು. ಅವರವರಿಗೆ ಯಾವುದರ ಮೇಲೆ ನಂಬಿಕೆ, ವಿಶ್ವಾಸ, ಭಕ್ತಿ ಇದೆಯೋ ಅದನ್ನ ಅವರು ಮಾಡಲಿ. ಅದಕ್ಕೆ ನಾವು ಅವಕಾಶ ಮಾಡಿಕೊಡಬೇಕು. ನಮಗಿರುವ ಭಾವನೆಗಳನ್ನು ಇನ್ನೊಬ್ಬರ ಮೇಲೆ ಹೇರಲಾಗದು ಎಂದು ಮಾಧುಸ್ವಾಮಿ ಹೇಳಿದರು.

ಇದನ್ನೂ ಓದಿ: ಸಿದ್ದರಾಮೋತ್ಸವಕ್ಕೆ ಬಿಜೆಪಿ ಕೇಂದ್ರ ನಾಯಕರು ತಕ್ಕ ಉತ್ತರ ನೀಡಲಿದ್ದಾರೆ: ಯತ್ನಾಳ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.