ಚಿಕ್ಕಮಗಳೂರು: ನಮ್ಮ ಮೇಲೆ ವಿಶ್ವಾಸವಿಟ್ಟು ವಿಧಾನ ಪರಿಷತ್ತು ಹಾಗೂ ರಾಜ್ಯಸಭೆಗೆ ಆಯ್ಕೆ ಮಾಡಿ ಎನ್ನುವುದು ಸ್ವಾಭಾವಿಕ ಕೋರಿಕೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಹೇಳಿದರು.
ಮಾಧ್ಯಗಳೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ತು ಹಾಗೂ ರಾಜ್ಯ ಸಭೆಗೆ ಯಾರನ್ನು ಆಯ್ಕೆ ಮಾಡಬೇಕು ಎಂಬುದು ಸಂಸತ್ತಿನ ಮಂಡಳಿ ತೀರ್ಮಾನ ಮಾಡುತ್ತದೆ. ಅದಕ್ಕಾಗಿ ಕೋರ್ ಕಮಿಟಿ ಶಿಫಾರಸು ಮಾಡುತ್ತದೆ. ಅಧ್ಯಕ್ಷರು ಈ ವಾರದ ಕೊನೆಯಲ್ಲಿ ಕೋರ್ ಕಮಿಟಿ ಕರೆಯಬಹುದು. ಕಮಿಟಿಯಲ್ಲಿ ಚರ್ಚೆ ಮಾಡಿ ನಂತರ ಹೆಸರನ್ನು ಶಿಫಾರಸು ಮಾಡುತ್ತೇವೆ. ಆ ಬಳಿಕ ಪಾರ್ಲಿಮೆಂಟರಿ ಬೋರ್ಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಆಯ್ಕೆ ಪ್ರಕ್ರಿಯೆ ವಿವರಿಸಿದರು.
ಕಮಿಟಿಯಲ್ಲಿ ಎಲ್ಲರ ಹೆಸರಗಳನ್ನು ಚರ್ಚೆ ಮಾಡುತ್ತೇವೆ. ಯಾರನ್ನು ಆಯ್ಕೆ ಮಾಡಿದರೇ ಸಮಾಜ, ಪಕ್ಷ, ಹಾಗೂ ರಾಜ್ಯಕ್ಕೆ ಒಳ್ಳೆಯದಾಗುತ್ತೆ ಎಂಬುದರ ಮೇಲೆ ನಾವು ಶಿಫಾರಸು ಮಾಡುತ್ತೇವೆ ಎಂದು ಹೇಳಿದರು.
ಉಮೇಶ್ ಕತ್ತಿ ಅವರು ನಾವು ಊಟಕ್ಕೆ ಸೇರಿದ್ದೇವೆ ಎಂದು ಅವರೇ ಹೇಳಿದ್ದಾರೆ. ಪಕ್ಷ ಬಲಗೊಳಿಸುವ ಕೆಲಸ ಮಾಡಬೇಕೆ ಹೊರತು, ದುರ್ಬಲಗೊಳಿಸುವ ಕೆಲಸ ಯಾರು ಮಾಡಬಾರದು ಎಂದು ಸಚಿವ ವ್ಯಂಗ್ಯವಾಡಿದರು.