ETV Bharat / state

ಇಂದು ಹಸೆಮಣೆ ಏರಬೇಕಿದ್ದ ಯುವಕ ಕೊರೊನಾ ಸೋಂಕಿಗೆ ಬಲಿ - ಚಿಕ್ಕಮಗಳೂರಿನಲ್ಲಿ ಮದುವೆ ಫಿಕ್ಸ್​ ಆಗಿದ್ದ ಯುವಕ ಕೊರೊನಾಗೆ ಬಲಿ,

ಸಾಂಸರಿಕ ಜೀವನಕ್ಕೆ ಕಾಲಿಡುವ ಸಂಭ್ರಮದಲ್ಲಿದ್ದ ಯುವಕನ ಬಾಳಲ್ಲಿ ವಿಧಿ ಆಟವಾಡಿದೆ. ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ ಆತ ಬಲಿಯಾಗಿದ್ದಾನೆ. ಈ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

Marriage fixed Young man died, Marriage fixed Young man died by coronavirus, Chikkamagaluru corona news, ಮದುವೆ ಫಿಕ್ಸ್​ ಆಗಿದ್ದ ಯುವಕ ಕೊರೊನಾಗೆ ಬಲಿ, ಚಿಕ್ಕಮಗಳೂರಿನಲ್ಲಿ ಮದುವೆ ಫಿಕ್ಸ್​ ಆಗಿದ್ದ ಯುವಕ ಕೊರೊನಾಗೆ ಬಲಿ, ಚಿಕ್ಕಮಗಳುರು ಕೊರೊನಾ ಸುದ್ದಿ,
ಇಂದು ಹಸೆಮಣೆ ಏರಬೇಕಿದ್ದ ಯುವಕ ಕೊರೊನಾಗೆ ಬಲಿ
author img

By

Published : Apr 29, 2021, 10:39 AM IST

ಚಿಕ್ಕಮಗಳೂರು: ಇವತ್ತೇ ಹಸೆಮಣೆ ಏರಿ ಬದುಕಿನ ಅಪರೂಪದ ಸಂಭ್ರಮದ ಕ್ಷಣಗಳನ್ನು ಸವಿಯಬೇಕಿದ್ದ ಯುವಕ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ದೇವರಕೊಡಿಗೆ ಗ್ರಾಮದಲ್ಲಿ ನಡೆದಿದೆ.

32 ವರ್ಷದ ಪೃಥ್ವಿರಾಜ್ ಸಾವನ್ನಪ್ಪಿದ ವ್ಯಕ್ತಿ. ಮದುವೆ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಹತ್ತು ದಿನಗಳ ಹಿಂದೆ ಇವರು ಸ್ವಗ್ರಾಮಕ್ಕೆ ಆಗಮಿಸಿದ್ದರು.

Marriage fixed Young man died, Marriage fixed Young man died by coronavirus, Chikkamagaluru corona news, ಮದುವೆ ಫಿಕ್ಸ್​ ಆಗಿದ್ದ ಯುವಕ ಕೊರೊನಾಗೆ ಬಲಿ, ಚಿಕ್ಕಮಗಳೂರಿನಲ್ಲಿ ಮದುವೆ ಫಿಕ್ಸ್​ ಆಗಿದ್ದ ಯುವಕ ಕೊರೊನಾಗೆ ಬಲಿ, ಚಿಕ್ಕಮಗಳುರು ಕೊರೊನಾ ಸುದ್ದಿ,
ಮದುವೆ ಆಮಂತ್ರಣ ಪತ್ರ

ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಪೃಥ್ವಿರಾಜ್​ಗೆ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಸೋಂಕು ಹರಡಿರುವುದು ದೃಢಪಟ್ಟಿದೆ. ಬರಬರುತ್ತಾ ಆರೋಗ್ಯ ತೀರಾ ಹದಗೆಟ್ಟಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಪೃಥ್ವಿರಾಜ್​ ಕೊನೆಯುಸಿರೆಳೆದಿದ್ದಾರೆ.

ಮದುವೆ ಸಂಭ್ರಮವಿರಬೇಕಿದ್ದ ಯುವಕನ ಮನೆಯಲ್ಲೀಗ ಸೂತಕದ ಛಾಯೆ ಅವರಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.